ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಪ್ರೋ ಕಂಪನಿಗೆ ಭಯ ಬಿದ್ದು ಮಂಡಿಯೂರಿದ ಬಿಬಿಎಂಪಿ

ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಸರ್ಕಾರದವರು ಸೇರಿಕೊಂಡು ನಾಟಕ ಮಾಡುತ್ತಿದ್ದಾರೆ ಎನ್ನುವ ಸಂಶಯ ಮೂಡಿದೆ. ಯಾಕೆಂದರೆ ಇವರಿಬ್ಬರೂ ಸೇರಿಕೊಂಡು ಆಡುತ್ತಿರುವ ನಾಟಕದ ಹೆಸರು ಆಪರೇಷನ್ ಡೆಮಾಲಿಷನ್.

ಹೌದು ಇವರಿಬ್ಬರು ಸೇರಿಕೊಂಡು ಸಾಮಾನ್ಯ ಜನರಿಗೆ ಒಂದು ನ್ಯಾಯ ಕೋಟಿ ಕುಳಗಳಿಗೆ ಇನ್ನೊಂದು ನ್ಯಾಯ ಎನ್ನುತ್ತಿದ್ದಾರೆ.

ಬಿಬಿಎಂಪಿ ಒಂದು ರೀತಿ ಹಲ್ಲು ಕಿತ್ತ ಹಾವಿನ ರೀತಿ ವರ್ತಿಸುತ್ತಿದೆ. ಇನ್ನೊಂದು ಕಡೆ ಬಡಜನರ ಮನೆಗಳ ಮೇಲೆ ನುಗ್ಗಿಸಿದ ಬುಲ್ಡೋಜರ್ ಗಳು ಈಗ ದೊಡ್ಡವರ ಜಾಗಗಳಿಗೆ ನುಗ್ಗದೇ ಸೈಲೆಂಟಾಗಿ ನಿಂತಿದೆ.

ಬಡವರ ಮನೆಗಳನ್ನು ಒಡೆದು ಹಾಕಿದ ಬಿಬಿಎಂಪಿಗೆ ವಿಪ್ರೋ ಕಂಪನಿಯ ಮೇಲೆ ಕೈ ಇಡಲು ಭಯ ಬಿದ್ದು ಮಂಡಿ ಊರಿದ್ದಾರೆ. ಇಂದು ಬೆಳಗಿನಿಂದ ಮಧ್ಯಾಹ್ನದ ವರೆಗೂ ಯಾವುದೇ ಕ್ರಮ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳು ಮಧ್ಯಾಹ್ನ ಕಾಟಾಚಾರಕ್ಕೆ ಸುಮ್ಮನೆ ಗೋಡೆ ಒಡೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಅದರಲ್ಲೂ ಅಧಿಕಾರಿಗಳು ಎಂತಹ ಯಡವಟ್ಟು ಮಾಡಿದ್ದಾರೆ ಎಂದರೆ ಯಾವುದೋ ಗೋಡೆ ಒಡೆದು ಮಾರ್ಕಿಂಗ್ ಮಾಡಿದ ಗೋಡೆಯನ್ನು ಹಾಗೆ ಬಿಟ್ಟು ಹೋಗಿದ್ದಾರೆ. ವಿಪ್ರೋದಿಂದ ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ ನೋಡಿ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

19/09/2022 08:54 pm

Cinque Terre

26.3 K

Cinque Terre

1

ಸಂಬಂಧಿತ ಸುದ್ದಿ