ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಹಾದೇವಪುರ ಕ್ಷೇತ್ರದಲ್ಲಿ ಆಪರೇಷನ್ ಬುಲ್ಡೋಜರ್

ಮಹಾದೇವಪುರ ಕ್ಷೇತ್ರದ ಚಿನ್ನಪ್ಪಹಳ್ಳಿಯಿಂದ ಮುನೇನಕೊಳಲು, ಸ್ಪೈಸ್ ಗಾರ್ಡನ್ ಮೂಲಕ ವರ್ತೂರ್ ಕೆರೆಗೆ ಹೋಗುವ ರಾಜ ಕಾಲುವೆಯನ್ನು ಗಾರ್ಡನ್ ಬಳಿ ಹಾದು ಹೋಗುವ ರಾಜಕಾಲುವೆಯಲ್ಲಿನ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆಯ ಗೋಡೆ, ಕಟ್ಟಡಗಳು ತೆರವು ಮಾಡಲಾಗುತ್ತಿದೆ.

ಈ ಹಿಂದೆ ಅಧಿಕಾರಿಗಳಿಗೆ ಮನೆಯ ಮಾಲೀಕರು ಮನವಿ ಮಾಡಿದರೂ ಸಹ ಕಿವಿ ಕೊಡದ ಅಧಿಕಾರ ತೆರವು ಕಾರ್ಯಚರಣೆ ಮುಂದುವರಿಸಿದ್ದಾರೆ. ಚಿನ್ನಪ್ಪನಹಳ್ಳಿಯ ಮುನೇನಕೊಳಲುಗೆ ಹೋಗುವ ರಾಜಕಾಲುವೆಯ ಮೇಲೆ ಕಟ್ಟಿದ್ದ 10 ಕಟ್ಟಡಗಳು ತೆರವು ಮಾಡಲಾಗಿದೆ.

ಸ್ಥಳೀಯ ವಿರೋಧ:

ಕಳೆದ ಎರಡು ದಿನಗಳ ಹಿಂದೆ ಮನೆ ಮಾಲೀಕರಿಗೆ ನೋಟಿಸ್ ನೀಡಿ, ಮುನೇನಕೊಳಲು ಮೂಲಕ ಸ್ಪೈಸ್ ಗಾರ್ಡನ್ ತನಕ 20ಕ್ಕೂ ಹೆಚ್ಚು ಕಡೆ ಒತ್ತುವರಿಗೊಳಿಸಿಲಾಗಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಯುತ್ತಿದ್ದು, ಸ್ಥಳೀಯರು ವಿರೋಧ ಮಾಡಿದವರನ್ನು ಪೊಲೀಸರ ವಶಕ್ಕೆ ಪಡೆದು ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನೋಟಿಸ್ ಕೊಟ್ಟ 7 ದಿನಕ್ಕೆ ತೆರವು:

ಮಹಾದೇವಪುರ ವಲಯದ ಮುಖ್ಯ ಇಂಜಿನಿಯರ್‌ ಬಸವರಾಜ್ ಕಬಾಡೆ ಮಾತನಾಡಿದ ಅವರು, ಚಿನ್ನಪ್ಪನಹಳ್ಳಿ ಕೆರೆಯಿಂದ ಮುನೇನಕೊಳಲು ತನಕ ತೆರವು ಕಾರ್ಯಚರಣೆ ನಡೆಯುತ್ತಿದೆ. ಬೆಳಿಗ್ಗೆಯಿಂದ ಮಾಡಿ ತೆರವು ಕಾರ್ಯಚರಣೆ ಶುರುವಾಗಿದೆ. ಸ್ಪೈಸ್ ಗಾರ್ಡನ್ ಬಳಿ 20 ಬಿಲ್ಡಿಂಗ್ ಗಳು ಒತ್ತುವರಿ ಮಾಡಿಕೊಂಡಿವೆ. ಚಿನ್ನಪ್ಪನಹಳ್ಳಿಯಲ್ಲಿ 5 ಬಿಲ್ಡಿಂಗ್ ಗಳು ಒತ್ತುವರಿಯಾಗಿವೆ. ಚಿನ್ನಪ್ಪನಹಳ್ಳಿಯಲ್ಲಿ 2ವರೆ ನಿಂದ 5ಮೀಟರ್ ಒತ್ತುವರಿಯಾಗಿದ್ದು, ತೆರವು ಕಾರ್ಯಚರಣೆ ನಡೆಯುತ್ತಿದೆ ಎಂದರು.

ಒತ್ತುವರಿಯಾದ ಜಾಗದಲ್ಲಿ ಬೃಹತ್ ನೀರುಗಾಲುವೆ ಕಾಂಪೌಂಡ್ ಕಟ್ಟಿಕೊಂಡದ್ದು, ಒತ್ತುವರಿಯಾಗ ಜಾಗ ಖಾಲಿ ಮಾಡಲು ಕಂದಾಯ ಇಲಾಖೆ ನೋಟಿಸ್ ನೀಡುತ್ತದೆ. ನೋಟಿಸ್ ನೀಡಿದ 7 ದಿನಕ್ಕೆ ತೆರವು ಕಾರ್ಯಚರಣೆ ನಡೆಯುತ್ತಿದೆ ಎಂದರು.

Edited By :
PublicNext

PublicNext

12/09/2022 05:30 pm

Cinque Terre

26.56 K

Cinque Terre

0

ಸಂಬಂಧಿತ ಸುದ್ದಿ