ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸಿನಿಮಾಗಿಂತ ಹೆಚ್ಚು ಫೇಮಸ್ ಆಗಿದ್ದು ಪುಂಡಾಟಕ್ಕೆ. ಹಣದ ಅಮಲು ಸ್ನೇಹಿತ್ ಪುಂಡಾಟಕ್ಕೆ ಬ್ರೇಕ್ ಹಾಕಬೇಕಾದ ಪೋಷಕರೇ ಶ್ರೀಮಂತಿಕೆಯ ಪೋಷಣೆ ಮಾಡ್ತಿದ್ದಾರೆ. ಸದ್ಯ ಜಗದೀಶ್ ಪುತ್ರ ಸ್ನೇಹಿತ್ ಮತ್ತೆ ಪುಂಡಾಟ ಮಾಡಿದ್ದಾನೆ ಎಂದು ಎಫ್‌ಐಆರ್ ದಾಖಲಾಗಿದೆ.
ಸ್ನೇಹಿತ್ ಎದುರು ಮನೆಯ ರಜತ್ ಗೌಡ ಮತ್ತು ಪತ್ನಿ ಕಾರಿನಲ್ಲಿ ಹೋಗುವಾಗ ಜಾಗ್ವರ್ ಕಾರಿನಲ್ಲಿ ಅಡ್ಡ ಬಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ರಜತ್ ಪತ್ನಿಗೆ ಸೀರೆಬಿಚ್ಚಿ ಹೊಡೆಯುವುದಾಗಿ ಬೆದರಿಸಿ ದಂಪತಿಗೆ ಹಲ್ಲೆ ಮಾಡಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ.
ಇನ್ನು ಇದಕ್ಕೂ ಮೊದಲು ಸ್ನೇಹಿತ್ ಕಾರು ಚಾಲಕ ಕೂಡ ರಜತ್ ಮೇಲೆ ದೂರು ದಾಖಲಿಸಿದ್ದು, ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕರಾಗಿರೋ ರಜತ್ ಮತ್ತು ಸಹೋದರ ಸ್ನೇಹಿತ್ ಕಾರು ಚಾಲಕನಿಗೆ ಜಾತಿ ನಿಂದನೆ ಮಾಡಿದ್ದಾರೆಂದು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಈ ಹಿಂದೆ ಕೂಡ ರಜತ ಫ್ಯಾಮಿಲಿ ಮೇಲೆ ಹಲ್ಲೆ ನಡೆಸಿ ಸ್ನೇಹಿತ್ ಮತ್ತು ಆತನ ತಾಯಿ ಬಂಧನದ ಭೀತಿಯಲ್ಲಿ ಊರು ಬಿಟ್ಟಿದ್ರು.
PublicNext
30/09/2022 02:54 pm