ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಾಡಿದ್ದು, ಈ ಪೈಕಿ ಇಂದು ಮಹದೇವಪುರ ವಿಭಾಗದ ಹೂಡಿ, ಟಿಝಡ್ ಅಪಾರ್ಟ್ಮ್ಂಟ್ ಹಾಗೂ ಕೆ.ಆರ್.ಪುರ ವಿಭಾಗದ ಗಾಯತ್ರಿ ಲೇಔಟ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಮಹದೇವಪುರ ವಿಭಾಗ ವೈಟ್ ಫೀಲ್ಡ್ ಉಪ ವಿಭಾಗದಲ್ಲಿ ಬರುವ ಟಿ.ಝಡ್ ಅಪಾರ್ಟ್‌ಮೆಂಟ್‌ನ 70 ಮೀಟರ್ ಉದ್ದದ ಕಾಂಪೌಂಡ್ ಗೋಡೆ ಹಾಗೂ ಭದ್ರತಾ ಸಿಬ್ಬಂದಿಯ ಕೊಠಡಿಯನ್ನು ತೆರವುಗೊಳಿಸಲಾಗಿದೆ.

ಹೂಡಿ ಉಪ ವಿಭಾಗದ ದಿಯಾ ಸ್ಕೂಲ್ ಕಾಂಪೌಂಡ್ ಗೋಡೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಾಗಿದ್ದ ಮಳೆ ನೀರುಗಾಲುವೆಯ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಅದರಂತೆ, ದಿಯಾ ಸ್ಕೂಲ್ ನ 25 ಮೀಟರ್ ಉದ್ದದ ಕಾಂಪೌಂಡ್ ಗೋಡೆ, ದಿಯಾ ಸ್ಕೂಲ್ ನ ಹತ್ತಿರವಿದ್ದ 3 ಶೆಡ್(1 ಫಿಶ್ ಸ್ಟಾಲ್, 2 ಗ್ಯಾರೇಜ್ ಶೆಡ್)ಗಳ ಮುಂಭಾಗದ ಗೋಡೆಯ ಭಾಗವನ್ನು ತೆರವುಗೊಳಿಸಲಾಗಿದೆ.

ವೈಟ್ ಫೀಲ್ಡ್ ರಿಂಗ್ ರಸ್ತೆ ಬದಿಯಿರುವ ಬಗಿನಿ ಹೋಟೆಲ್ ಮುಂಭಾಗದ ರಾಜಣ್ಣ ಗೌಡ್ರು ಹೋಟೆಲ್ 8 X 15 ಮೀಟರ್ ನ ಗೋಡೆಯನ್ನು ತೆರವುಗೊಳಿಸಲಾಗಿದೆ. ಇನ್ನು ಬಗಿನಿ ಹೋಟೆಲ್ ನಿಂದಲೂ ಒತ್ತುವರಿಯಾಗಿದ್ದು, ಒತ್ತುವರಿಯ ಭಾಗದಲ್ಲಿ ಗ್ಲಾಸ್ ಅಳವಡಿಸಿದ್ದು, ಬಗಿನಿ ಹೋಟೆಲ್ ನವರೇ ಸ್ವತಹ ತೆರವುಗೊಳಿಸುವುದಾಗಿ ತಿಳಿಸಿರುತ್ತಾರೆ. ಈ ಸಂಬಂಧ ಕೂಡಲೆ ತೆರವುಗೊಳಿಸಲು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿರುತ್ತಾರೆ. ವೈಟ್ ಫೀಲ್ಡ್ ರಿಂಗ್ ರಸ್ತೆಯ ಮತ್ತೊಂದು ಭಾಗದಲ್ಲಿ ಸುಮಾರು 20 ಅಡಿ ಜಾಗದಲ್ಲಿದ್ದು ಶೀಟಿನ 2 ಶೆಡ್ ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

ಕೆ.ಆರ್.ಪುರ ವಿಭಾಗ ಬಸವನಪುರ ವಾರ್ಡ್ ಗಾಯಿತ್ರಿ ಲೇಔಟ್ ನಲ್ಲಿ ಇಂದು ಕೂಡಾ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಸುಮಾರು 60 ಮೀಟರ್ ಉದ್ದದ ನೀರು ಗಾಲುವೆಯ ಸ್ಥಳದಲ್ಲಿ ನಿರ್ಮಿಸಿದ್ದ 6 ಆರ್.ಸಿ.ಸಿ ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.

ಮೊದಲಿಗೆ, 3 ಅಂತಸ್ತಿನ ವಸತಿ ಕಟ್ಟಡ(G + 3)ದ ನೆಲಮಹಡಿಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಉಳಿದ ಮೇಲ್ಬಾಗದ ಗೋಡೆಯನ್ನು ಸಿಬ್ಬಂದಿಗಳ ಮೂಲಕ ತೆರವುಗೊಳಸಲಾಗುತ್ತದೆ. ಇನ್ನುಳಿದ 5 ವಸತಿ ಕಟ್ಟಡಗಳ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆ ಭಾಗವನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ವೇಳೆ ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಾರ್ಷಲ್‌ಗಳು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

12/10/2022 10:27 pm

Cinque Terre

20.05 K

Cinque Terre

3