ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ವಾರ್ಡ್ ವ್ಯಾಪ್ತಿಯಲ್ಲಿ ಈ ಕೆರೆ ಇದೆ. ಇದು ಬುಡ್ಡೆ ಸೊಪ್ಪು ಕೆರೆ ಅಂತಾನೆ ಪ್ರಖ್ಯಾತಿ ಹೊಂದಿದೆ. ಈ ಕೆರೆ ಸುಮಾರು ವರ್ಷದಿಂದ ಅಭಿವೃದ್ಧಿ ಹೊಂದದೆ ಹಾಗೆ ಇತ್ತು. ಆದರೆ ಇಂದು ಅಭಿವೃದ್ಧಿಗಾಗಿ ಹಣ ಬಿಡುಗಡೆಗೊಳಿಸಿ ಸಹಕಾರ ಸಚಿವರ ಪಬ್ಲಿಕ್ ನೆಕ್ಸ್ಟ್‌ನೊಂದಿಗೆ ಮಾತನಾಡಿದ್ದಾರೆ.
ಇನ್ನು ಈ ಕೆರೆ 34 ಎಕರೆ ಗಿಂತ ಹೆಚ್ಚು ವೀಸ್ತೀರ್ಣ ಹೊಂದಿದೆ. ಆದ್ರೆ ಪ್ರಯೋಜನವಾಗದೇ ಉಳಿದಿದೆ. ಕೆಲವು ದಿನಗಳ ಹಿಂದೆ ಕೆರೆಯ ಸುತ್ತಲಿನ ಪ್ರದೇಶ ಅನೈತಿಕ ಚಟುವಟಿಕಗಳ ತಾಣವಾಗಿತ್ತು. ಖಾಸಗಿ ಬಡಾವಣೆಯಿಂದ ಕೊಳಚೆ ನೀರು ಹರಿದೂ ಈ ಕೆರೆ ಕಲುಷಿತವಾಗಿದೆ. ಆದ್ದರಿಂದ, ಕೆರೆಯ ಆಸು ಪಾಸುನಲ್ಲಿ ಪ್ರತ್ಯೇಕವಾದ ಮೋರಿ ನಿರ್ಮಾಣ ಮಾಡಿ ನಂತರ ಅಭಿವೃದ್ಧಿ ಮಾಡಿ, ಪಾರ್ಕ್ ನಿರ್ಮಾಣ, ಕೆರೆಯ ಹೂಳನ್ನ ತೆಗೆದು ಬೋಟಿಂಗ್ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಉಳಿದಂತೆ ಕೆರೆಯ ಸಂಪೂರ್ಣ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಯೋಜನೆ ಇದೆ. ಕಲುಷಿತ ನೀರು ಕೆರೆಗೆ ಸೇರದಂತೆ, ಅಧಿಕಾರಿಗಳಿಗೆ ಸೂಚನೆ ನೀಡಿದ ಸಹಕಾರ ಸಚಿವಎಸ್.ಟಿ ಸೋಮಶೇಖರ್ ಸ್ಥಳ ಪರಿಶೀಲಿಸಿದ್ದಾರೆ.
ಈ ಹಿಂದೆ ಕೆಂಗೇರಿ ಕೆರೆಯ ಸ್ಥಳ ಪರಿಶೀಲನೆ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಣ ಬಿಡುಗಡೆ ಮಾಡಿಸಿ ಕಾಮಗಾರಿಯನ್ನ ಅರ್ಧಕ್ಕೆ ಕೈ ಬಿಟ್ಟಿದ್ರು. ಆದರೆ ಈಗ ಎಲ್ಲ ರೀತಿಯ ಕಾಮಗಾರಿ ಮಾಡಿ, ಸಾರ್ವಜನಿಕರಿಗೆ ಶುಚಿಯಾದ ವ್ಯವಸ್ಥೆ ಕಲ್ಪಿಸಲಾಗುತ್ತೆ ಎಂದು ಸ್ಥಳೀಯರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಈ ಕೆರೆಗೆ ಈಗಾಗ್ಲೆ 4 ಕೋಟಿ ಹಣ ಬಿಡುಗಡೆ ಮಾಡಿ, ಕಾಮಗಾರಿಯನ್ನ ಪ್ರಾರಂಭ ಮಾಡಲಾಗಿದೆ. ಸದ್ಯದರಲ್ಲೇ ಕೆಂಗೇರಿ ಕೆರೆ ಕಂಗೊಳಿಸಲಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
10/10/2022 07:55 pm