ಬೆಂಗಳೂರು: ಕಳೆದ ಎಂಟು ಹತ್ತು ದಿನದ ಹಿಂದೆ ಆ್ಯಂಬುಲೆನ್ಸ್ ಸಮಸ್ಯೆಯಿಂದ ಎರಡು ಜೀವ ಅನಾಥವಾಗಿದ್ದವು. ಜೊತೆಗೆ ಸಾವಿರಾರು ಜನ ಸಂಕಷ್ಟದಲ್ಲಿ ಸಿಲುಕ್ಕಿದ್ದರು. ಆದ್ರೆ ಈಗ ಅದೇ ಜೀವ ಉಳಿಸುವ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂಬಳ ಇಲ್ಲ. ಸಂಬಳ ಕೊಡದೇ ವಾಹನಸವಾರರ ಜೊತೆ ಸರ್ಕಾರ ಚೆಲ್ಲಾಟ ಆಡುತ್ತಿದ್ದೆ.
ಇನ್ನೂ ಇದನ್ನೆಲ್ಲ ಬಗೆಹರಿಸಬೇಕಾಗಿದ್ದ ಸರ್ಕಾರ, ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ದಸರಾ ಹಬ್ಬದ ಸಂಭ್ರಮಾಚರಣೆಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಮೂರುವರೆ ಸಾವಿರಕ್ಕಿಂತ ಹೆಚ್ಚು ಜನರು ತಮ್ಮ ಜೀವವನ್ನ ಪಣಕ್ಕಿಟ್ಟು ಇನ್ನೊಬ್ಬರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಕಳೆದ ವಾರದಲ್ಲಿ ಆ್ಯಂಬುಲೆನ್ಸ್ ಕೇವಲ 24 ಗಂಟೆ ಸ್ಥಗಿತಗೊಂಡಿದ್ದಕ್ಕೆ ಎರಡು ಜೀವ ಹೋಗಿ ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದರು.
ಇನ್ನೂ ಆ್ಯಂಬುಲೆನ್ಸ್ ಸಿಬ್ಬಂದಿ ಕಚೇರಿಗೆ ಬರಲು ಆಗದೆ 108 ವಾಹನ ಸಿಬ್ಬಂದಿ ಇಲ್ಲದೆ ವಾಹನಗಳು ನಿಂತರೆ ಮತ್ತಷ್ಟು ಜೀವಗಳು ಬಲಿಯಾಗೋದು ಗ್ಯಾರಂಟಿ. ಇಷ್ಟೆಲ್ಲ ಗೊತ್ತಿದ್ದರೂ ಸರ್ಕಾರ ಮಾತ್ರ ಸಿಬ್ಬಂದಿಯ ಬಗ್ಗೆ ಗಮನಹರಿಸದೇ ಕಣ್ಣುಮುಚ್ಚಿ ಕುಳಿತಿದೆ.
PublicNext
05/10/2022 07:57 pm