ಬೆಂಗಳೂರು: ಬೆಂಗಳೂರಿನಲ್ಲಿ ಎಷ್ಟೇ ಸುವ್ಯವಸ್ಥಿತವಾದ ರಸ್ತೆಗಳಿದ್ರೂ, ಬಹಳಷ್ಟು ಆಕ್ಸಿಡೆಂಟ್ ಸ್ಪಾರ್ಟ್ ಗಳಾಗಿರುತ್ತವೆ. ಹಾಗೇ ಇಲ್ಲೊಂದು ರಸ್ತೆಯಲ್ಲೂ ಕೂಡ ಹೊಸದಾಗಿ ವೈಟ್ ಟಾಪಿಂಗ್ ಆಗಿದೆ. ಗುಂಡಿ ಸಮಸ್ಯೆನೂ ಇಲ್ಲ. ಆದ್ರೆ, ಪ್ರತಿನಿತ್ಯವೂ ಆಕ್ಸಿಡೆಂಟ್ ಆಗುತ್ತಿವೆ. ಒಳ್ಳೆಯ ರಸ್ತೆ ಇದ್ರೂ ಯಾಕೆ ಆಕ್ಸಿಡೆಂಟ್ ಆಗುತ್ತೆ ಅಂತೀರಾ, ಹಾಗಾದ್ರೆ ಈ ಮಾಹಿತಿ ನೋಡಿ...
ಕೆಂಗೇರಿ ಉಪನಗರದ ಪೋಸ್ಟ್ ಆಫೀಸ್ ರಸ್ತೆಯೇ ಇದು. ಇಲ್ಲಿ ಕೆಲ ದಿನಗಳ ಹಿಂದಷ್ಟೇ ವೈಟ್ ಟಾಪಿಂಗ್ ಕಾಮಗಾರಿ ಕಂಪ್ಲೀಟ್ ಆಗಿ ಗುಂಡಿ ಮುಕ್ತ ರಸ್ತೆಯಾಗಿದೆ. ಆದ್ರೂ ದಿನನಿತ್ಯ ಅಪಘಾತ ಸಂಭವಿಸುತ್ತಿವೆ!
ಕೆಂಗೇರಿ, ಶಿರ್ಕೆ, ಶೇಷಾದ್ರಿಪುರಂ ಕಾಲೇಜು ಹೀಗೆ ನಾನಾ ಕಡೆಯಿಂದ ವಾಹನಗಳು ಇಲ್ಲಿ ಬಂದು ಸೇರುತ್ತವೆ. ಹೀಗಾಗಿ ಇಲ್ಲಿ ಆಕ್ಸಿಡೆಂಟ್ ಸಾಲುಸಾಲಾಗಿ ಸಂಭವಿಸುತ್ತಿವೆ. ಪೋಸ್ಟ್ ಆಫೀಸ್ ಗೆ ಬರುವವರಿರುತ್ತಾರೆ, ವಿದ್ಯಾರ್ಥಿಗಳೂ ಓಡಾಡುತ್ತಾರೆ. ಆದ್ರೆ, ಎಲ್ಲೂ ಸಹ ಹಮ್ಸ್ ಇಲ್ಲ, ಸಿಗ್ನಲ್ ವ್ಯವಸ್ಥೆಯೂ ಇಲ್ಲ. ಹೆಂಗಂದ್ರೆ ಹಂಗೆ ವಾಹನಗಳು ನುಗ್ಗುವುದ್ರಿಂದ ಇಲ್ಲಿ ಬಹಳಷ್ಟು ಆಕ್ಸಿಡೆಂಟ್ಸ್ ಘಟಿಸುತ್ತಿವೆ ಎಂದು ಸಾರ್ವಜನಿಕರು, ಹಮ್ಸ್ ಮತ್ತು ಸಿಗ್ನಲ್ ವ್ಯವಸ್ಥೆ ಶೀಘ್ರ ಮಾಡಬೇಕು ಅಂತ ಆಗ್ರಹಿಸುತ್ತಿದ್ದಾರೆ.
-ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
23/09/2022 10:42 pm