ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್‌ನಲ್ಲಿ ನಿಲ್ಲದ ನೆರೆ ಅವಾಂತರ

ಬೆಂಗಳೂರು: ಎಷ್ಟೊ ರಾಜಕಾಲುವೆ ಕಡೆ ಒತ್ತುವರಿ ಆಗಿ ಜಾಗ ಇಲ್ಲದಂತಾಗಿ ನೀರು ಹರಿಯೋದಕ್ಕೆ ಕಷ್ಟ ಆಗುತ್ತೆ. ಆದ್ರೆ ಯಶವಂತಪುರ ವಿಧಾನಸಭಾ ಕ್ಷೇತ್ರ ಹೆಮ್ಮಿಗೆಪುರ ವಾರ್ಡ್ ನಾ ಬಾಲಾಜಿ ಲೇಔಟ್‌ನಲ್ಲಿ ವಿಸ್ತಾರವಾದ ಜಾಗ ಇದ್ದು, ಮೋರಿ ಹರಿಯೋದಕ್ಕೆ ಜಾಗ ಇದ್ರೂ ಮೋರಿ ನೀರು, ಮೋರಿಯಲ್ಲಿ ಹೋಗದೆ ರಸ್ತೆ ಮೇಲೆ ಹೋಗುತ್ತಿದೆ. ಓಡಾಡುವುದಕ್ಕೆ ರಸ್ತೆ ಇಲ್ಲದೆ, ಮನೆಗಳಿಗೆ ಮೋರಿ ನೀರು ನುಗ್ಗಿ ಸಂಕಷ್ಟ ಎದುರಿಸುತ್ತಿದ್ದಾರೆ..

ಈ ಹಿನ್ನಲೆ ಇಲ್ಲಿಗೆ ಸಚಿವರು ಎಸ್.ಟಿ ಸೋಮಶೇಖರ್ ಹಾಗೂ ಮಾಜಿ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್ ಕೂಡ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಆಲಿಸಿದ್ರು. ಆದ್ರು ಕೂಡ ಅಲ್ಲಿರುವ bwssb,ಬೆಸ್ಕಾಂ, ಬಿಬಿಎಂಪಿ ಯ ಅಧಿಕಾರಿಗಳ ಸೋಮಾರಿ ತನದಿಂದ, ಅವೈಜ್ಞಾನಿಕ ಕಾಮಗಾರಿ ಮಾಡಲು ಹೋಗಿ ಸ್ಥಳೀಯ ಸಾರ್ವಜನಿಕರಿಗೆ ತೊಂದರೆ ತಂದೊಡ್ಡಿದ್ದಾರೆ..

ಈಗಾಗ್ಲೆ ಮೋರಿ ನೀರಿನಿಂದ ಈಗಾಗ್ಲೆ ಎಷ್ಟೊ ಜನ ಮನೆ ಕಾಲಿ ಮಾಡೊದ್ದಾರೆ, ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಸರಿಯಾದ ಕಾಮಗಾರಿ ಮಾಡಿ, ಸಾರ್ವಜನಿಕರಿಗೆ ರಸ್ತೆ ವ್ಯವಸ್ಥೆ ಮಾಡಿಕೊಡಬೇಕಿದೆ.

-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Shivu K
PublicNext

PublicNext

14/09/2022 08:24 am

Cinque Terre

41.41 K

Cinque Terre

0

ಸಂಬಂಧಿತ ಸುದ್ದಿ