ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್‌ಪೇಟೆಯಿಂದ ಸರ್ಜಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 648ರ ನಿರ್ಮಾಣವಾಗುತ್ತಿದೆ. ಈ ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಡಿಬಿಎಲ್- ದಿಲೀಪ್ ಬಿಲ್ಡ್‌ಕಾನ್ ಕಂಪನಿ ನಿರ್ವಹಿಸುತ್ತಿದೆ. ವಿವಿಧ ಉದ್ದೇಶಗಳ ಜಲ್ಲಿ ಕ್ರಷರ್, ಡಸ್ಟ್, ಟಾರ್ ಮಿಕ್ಸಿಂಗ್ ಯೂನಿಟ್ ಹೆದ್ದಾರಿಗೆ ಹೊಂದಿಕೊಂಡ ಬಾಲೇಪುರ ಬಳಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಉತ್ಪಾದನೆ ಆಗುವ ಧೂಳು ಕಳೆದ ಮೂರು ವರ್ಷಗಳಿಂದ ಬಾಲೇಪುರ, ಮಲ್ಲೇಪುರ, ನಲ್ಲಪ್ಪನಹಳ್ಳಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
Byte:- ಮಲ್ಲೇಪುರ ರೈತ.
ಡಿಬಿಎಲ್ ಕಂಪನಿ ಕಳೆದ ಮೂರು ವರ್ಷಗಳಿಂದ ಈ ಬಾಲೇಪುರದ ಯೂನಿಟ್‌ನಲ್ಲಿ ರಸ್ತೆ ನಿರ್ಮಾಣದ ಕಚ್ಚಾ ವಸ್ತು, ಲೋಡಿಂಗ್, ಅನ್ಲೋಡ್ ಮಾಡುವ ವೇಳೆ ನಿರ್ಮಾಣವಾಗುವ ದೂಳು ಸುಮಾರು ಎರಡು ಕಿ.ಮೀ.ವ್ಯಾಪ್ತಿಯನ್ನೆಲ್ಲಾದೂಳುಮಯ ಮಾಡಿದೆ. ಪರಿಣಾಮ ಬೆಳೆಯುತ್ತಿರುವ ರಾಗಿ, ಅವರೆ, ಅಲಸಂದೆ, ತರಕಾರಿ, ಜೋಳ, ಹಿಪ್ಪುನೇರಳೆ, ಹುಲ್ಲು ಎಲ್ಲವೂ ದೂಳುಮಯ. ಇದರಿಂದ ಬೇಸತ್ತ ಜನ ಡಿಬಿಎಲ್ ಘಟಕದ ದೂಳಿನ ವಿರುದ್ಧ ಪ್ರತಿಭಟನೆಗಳಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Byte:-ಗಿರೀಶ್, ಸ್ಥಳೀಯ ಹೋರಾಟಗಾರ.
Byte:- ಕನ್ನಡಪರ ಹೋರಾಟಗಾರ.
ಸ್ಥಳೀಯ ಜನ ಗಿರೀಶರ ನೇತೃತ್ವದಲ್ಲಿ, ದಲಿತ ಸಂಘಟನೆ, ಕರುನಾಡ ವಿಜಯ ಸೇನೆ ಸಹಕಾರದಲ್ಲಿ ಪ್ರತಿಭಟನೆ ನಡೆಸಲಾಯ್ತು. ಸ್ಥಾವರಕ್ಕೆಮುತ್ತಿಗೆ ಹಾಕಿ ಧೂಳಿನ ವಿರುದ್ಧ ಹೋರಾಟ ನಡೆಸಲಾಯ್ತು. ಈ ವೇಳೆ ಚನ್ನರಾಯಪಟ್ಟಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ಪ್ರಯತ್ನಿಸಿದ್ರು. ಆದರೆ ಪ್ರತಿಭಟನಾನಿರತರು ಧೂಳು ನಿಲ್ಲುವವರೆಗೂ ಹೋರಾಟ ಮುಂದುವರೆಸ್ತೇವೆ ಎಂದು ಪಟ್ಟು ಹಿಡಿದರು. ಡೆಪ್ಯೂಟಿ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸೊ ಭರವಸೆ ನೀಡಿದರು. ಈ ಭರವಸೆ ಈಡೇರಲಿ.
PublicNext
30/09/2022 02:13 pm