ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಡೆಂಘಿ ಸೋಂಕಿತರ ಸಂಖ್ಯೆ ಏರಿಕೆ ಕಾಣ್ತಿದೆ. ಇತ್ತ ಡೆಂಘಿ ಕಂಟ್ರೋಲ್ ಗೆ ಸರ್ಕಸ್ ಮಾಡ್ತಿದ್ರೂ ಕೇಸ್ ಮಾತ್ರ ತಗ್ಗದೇ ಇರೋದರಿಂದ ಕಂಗಾಲಾದ ಪಾಲಿಕೆ, ಇದೀಗ ಡೆಂಘಿ ಕೇಸ್ ಗಳ ಏರಿಕೆಗೆ ಅಸಲಿ ಕಾರಣ ಪತ್ತೆಹಚ್ಚಿದ್ದು, ಡೆಂಘೀ ಟೆಸ್ಟಿಂಗ್ ರಿಪೋರ್ಟ್ ಕೊಡುವ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ...
ಡೆಂಘಿಗೆ ಕಡಿವಾಣ ಹಾಕಲು ಫಾಗಿಂಗ್, ಔಷಧ ಸಿಂಪಡಣೆ ಮಾಡಿದ್ರೂ ಡೆಂಘೀ ಕೇಸ್ ಏರಿಕೆಯಾಗ್ತಿರೋದು ಪಾಲಿಕೆಗೆ ಟೆನ್ಷನ್ ತಂದಿಟ್ಟಿದೆ. ಇತ್ತ ಡೆಂಘೀಯಿಂದ ಸಾವನ್ನಪ್ಪಿದವರು ಅಂತಾ ಯಾರನ್ನ ಗುರ್ತಿಸಲಾಗ್ತಿದೆಯೋ ಅವರ ರಿಪೋರ್ಟ್ ಸರ್ಕಾರಿ ಆಸ್ಪತ್ರೆಗಳಲ್ಲಿ ನೆಗೆಟಿವ್ ಬರ್ತಿರೋದು ಅಚ್ಚರಿ ಹುಟ್ಟಿಸಿದೆ.. ಸದ್ಯ ಬೆಂಗಳೂರಿನಲ್ಲಿ ಇದುವರೆಗೆ ಡೆಂಘೀಯಿಂದ ಮೂವರು ಮೃತಪಟ್ಟಿರೋದು ಆರೋಗ್ಯ ಇಲಾಖೆಯಿಂದ ದೃಢಪಟ್ಟಿದೆ.
ಆದ್ರೆ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಯಾರೇ ಸಾವನ್ನಪ್ಪಿದ್ರೂ ಅವರ ಡೆಂಘೀ ಟೆಸ್ಟಿಂಗ್ ರಿಪೋರ್ಟ್ ಪಾಸಿಟಿವ್ ಬರ್ತಿರೋ ಬಗ್ಗೆ ನಿಗಾ ಇಟ್ಟ ಪಾಲಿಕೆಗೆ ಅಸಲಿ ಕಾರಣ ಬಯಲಾಗಿದೆ. ಡೆಂಘೀ ಪತ್ತೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸೋ NS1 ಟೆಸ್ಟ್ ನಲ್ಲಿ ಬಹುತೇಕ ಪಾಸಿಟಿವ್ ರಿಪೋರ್ಟ್ ಬರ್ತಿದೆ. ಇತ್ತ ಅದೇ ಮಾದರಿಯನ್ನ ಸರ್ಕಾರಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿದಾಗ ನೆಗೆಟಿವ್ ಬರ್ತಿದ್ದು, ಪಾಸಿಟಿವ್ ರಿಪೋರ್ಟ್ ಕೊಟ್ಟ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಪಾಲಿಕೆ ಸಜ್ಜಾಗಿದೆ. ಯಾವ್ಯಾವ ಖಾಸಗಿ ಆಸ್ಪತ್ರೆಗಳು ಮೃತಪಟ್ಟವರಿಗೆ ಪಾಸಿಟಿವ್ ರಿಪೋರ್ಟ್ ನೀಡಿದೆ ಅನ್ನೋ ಬಗ್ಗೆ ನಿಗಾ ಇಟ್ಟಿರೋ ಪಾಲಿಕೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದೆ. ಅಲ್ಲದೇ ಟೆಸ್ಟ್ ಮೂಲಕ ಜನರಿಗೆ ಆತಂಕ ಮೂಡಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸೋಕು ಪ್ಲಾನ್ ಮಾಡಿದೆ.
PublicNext
25/07/2024 01:55 pm