ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿಗೆ ಸಿಬ್ಬಂದಿ ಕೊರತೆ ಬಿಸಿ; 1,000ಕ್ಕೂ ಹೆಚ್ಚು ಬಸ್‌ ಡಿಪೋದಲ್ಲೇ ಬಾಕಿ!

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ ಮತ್ತು 1,000ಕ್ಕೂ ಹೆಚ್ಚು ಬಸ್‌ಗಳು ನಿಷ್ಕ್ರಿಯವಾಗಿ ಬಿದ್ದಿವೆ. ಏಕೆಂದರೆ ಬಸ್ ಓಡಿಸಲು ಸಿಬ್ಬಂದಿಯೇ ಇಲ್ಲ.

ಬಿಎಂಟಿಸಿ 6,771 ಬಸ್‌ಗಳನ್ನು ಹೊಂದಿದೆ. ಆದರೆ, ಈ ಸಂದರ್ಭ 5,660 ಬಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ನಗರದಲ್ಲಿ ಸುಮಾರು 12,000 ಬಸ್ಸುಗಳ ಅಗತ್ಯವಿದೆ. ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ನೇಮಕಾತಿ ನಡೆದಿಲ್ಲ.

6,800 ಬಸ್‌ಗಳನ್ನು ಚಲಾಯಿಸಲು ಪ್ರತಿ ಬಸ್‌ಗೆ ಐವರು ಚಾಲಕರು- ಕಂಡಕ್ಟರ್‌ಗಳು ಇರಬೇಕು. bmtcಗೆ 31,280 ಚಾಲಕರು ಮತ್ತು ಕಂಡಕ್ಟರ್‌ಗಳು ಬೇಕಾಗುತ್ತಾರೆ. ಆದರೆ, ಅವರ ಬಳಿ ಕೇವಲ 24,000 ನೌಕರರು ಮಾತ್ರ ಇದ್ದಾರೆ. ಬಿಎಂಟಿಸಿ ಹವಾನಿಯಂತ್ರಿತ ಬಸ್‌ಗಳಲ್ಲಿ ಅರ್ಧಕ್ಕಿಂತ ಕಡಿಮೆ ಬೇಡಿಕೆಯಿದ್ದರೂ ಕಾರ್ಯನಿರ್ವಹಿಸುತ್ತಿವೆ.

ಡೀಸೆಲ್ ಬೆಲೆ ಏರಿಕೆಯೂ ಹಿನ್ನಡೆಗೆ ಕಾರಣ ಎಂದು ಹೇಳಿದ ಅಧಿಕಾರಿಗಳು, ಹೆಚ್ಚಿನ ಸಿಬ್ಬಂದಿಯನ್ನು ಸಾಮಾನ್ಯ ಶಿಫ್ಟ್ ನಲ್ಲಿ ನಿಯೋಜಿಸಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ ಎಂದರು.

-ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

24/09/2022 07:29 am

Cinque Terre

32.5 K

Cinque Terre

2

ಸಂಬಂಧಿತ ಸುದ್ದಿ