ಬೆಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಈಗ ಕರೆಂಟ್ ಶಾಕ್ ಬಿಸಿ ತಟ್ಟಿದೆ. ಇಂಧನ ಹೊಂದಾಣಿಕೆ ಶುಲ್ಕ ಹೆಚ್ಚಾಗಲಿದ್ದು ಅಕ್ಟೋಬರ್ 1 ರಿಂದಲೇ ಗ್ರಾಹಕರಿಗೆ ಶುಲ್ಕದ ಬರೆ ಬೀಳಲಿದೆ. ಕಳೆದ ಏಪ್ರಿಲ್‌ನಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂನಲ್ಲಿ ವಿದ್ಯುತ್ ದರ ಏರಿಕೆಯಾಗಿತ್ತು. ಈಗ ಅಕ್ಟೋಬರ್‌ನಲ್ಲಿ ಇಂಧನ ವೆಚ್ಚ ಶುಲ್ಕದ ಬಿಸಿ ಗ್ರಾಹಕರಿಗೆ ಮುಟ್ಟಲಿದ್ದು ಪ್ರತಿ ಯೂನಿಟ್ ಮೇಲೆ 43 ಪೈಸೆ ದರ ಏರಿಕೆಯಾಗಲಿದೆ.
ಮುಂದಿನ ವರ್ಷ ಮಾರ್ಚ್‍ವರೆಗೆ ಈ ದರ ಇರಲಿದೆ. ಕಲ್ಲಿದ್ದಲಿನ ದರ ಏರಿಕೆಯಾದಾಗ ಈ ದರ ಏರಿಕೆ ಅನಿವಾರ್ಯ ಎನ್ನುವುದು ಬೆಸ್ಕಾಂ ಸ್ಪಷ್ಟನೆ. ಆದರೆ ಜನರಿಗೆ ಮಾತ್ರ ಗಾಯದ ಮೇಲೆ ಬರೆಎಳೆದಂತಾಗಿದೆ. ಇಂಧನ ಹೊಂದಾಣಿಕೆ ಶುಲ್ಕವನ್ನು ಮೂರು ತಿಂಗಳಿಗೊಮ್ಮೆ KERC ಪರಿಶೀಲನೆ ಮಾಡುವಂತೆ ಬೆಸ್ಕಾಂ ಮನವಿ ಕೂಡ ಮಾಡಿದೆ. ಆದರೆ ಸದ್ಯ ಆರು ತಿಂಗಳಿಗೆ ಅನ್ವಯವಾಗುವಂತೆ ದರ ಏರಿಕೆಯಾಗುತ್ತಿದೆ. ನವರಾತ್ರಿಯ ಸಂದರ್ಭದಲ್ಲಿಯೇ ಕೆಇಆರ್‌ಸಿ ಶಾಕ್ ಕೊಟ್ಟಿದೆ.
PublicNext
23/09/2022 02:32 pm