ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರದ ಅಧಿಕಾರಿಗಳೆ 35ಕೋಟಿ ಮೌಲ್ಯದ ಸ್ಮಶಾನ ಜಾಗವನ್ನ ಬಿಲ್ಡ್‌ರ್‌ಗಳು ಕಬಳಿಸಲು ಹುನ್ನಾರ!

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಸರ್ಕಾರಿ ಗೋಮಾಳ,ಗುಂಡುತೋಪು, ಕೆರೆಯಗಳ ಮತ್ತು ಸ್ಮಶಾನ ಜಾಗವನ್ನು ಉಳಿಸಬೇಕಿದ್ದ ತಾಲೂಕು ಕಂದಾಯ ಅಧಿಕಾರಿಗಳೆ ಬಿಲ್ಡ್‌ರ್‌ಗಳಿಗೆ ಜಮೀನು ಮಾಡಿಕೊಡಲು ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ದೇವನಹಳ್ಳಿ ಪುರಸಭೆ ವ್ಯಾಪ್ತಿಯ7ಎಕರೆ ಜಮೀನು ಈ‌ ಹಿಂದೆ ಹಿಂದೂ ರುದ್ರಭೂಮಿ. ಸುಮಾರು 35ಕೋಟಿಗೂ ಅಧಿಕ ಬೆಲೆಯ ಜಮೀನನ್ನು ಇದೀಗ ಸರ್ಕಾರಿ ಖರಾಬು ಅಂತಾ ಪಹಣಿ ಬದಲು ಮಾಡಿ, ನಂತರ ಕಬಳಿಸಲು ಬಿಲ್ಡ್‌ರ್‌ಗಳು ಹುನ್ನಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.

ದೇವನಹಳ್ಳಿ ಹೊರವಲಯದ ಸ್ಮಶಾನದಲ್ಲು ಈಗಾಗಲೇ ಐದು ಸಾವಿರಕ್ಕು ಹೆಚ್ಚು ಶವಗಳನ್ನು ಸಂಸ್ಕಾರ ಮಾಡಲಾಗಿದೆ. ಇದೀಗ ದೇವನಹಳ್ಳಿ ಪಟ್ಟಣ ನಿವಾಸಿಗಳು ಇಂದು ಅಕ್ರಮದ ವಿರುದ್ಧ ಅಣುಕು ಶವಯಾತ್ರೆ ನಡೆಸಿ ಜನ ಪ್ರತಿಭಟಿಸಿದ್ದಾರೆ. ಪರಸ್ಪರ ಬಾಯ್ಬಾಯ್ ಬಡ್ಕೊಂಡು ಸ್ಮಶಾನ ಜಾಗ ಉಳಿಸುವಂತೆ ದೇವನಹಳ್ಳಿ ಪಟ್ಟಣದಲ್ಲಿ ‌ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : Manjunath H D
PublicNext

PublicNext

21/09/2022 10:34 pm

Cinque Terre

30.86 K

Cinque Terre

1

ಸಂಬಂಧಿತ ಸುದ್ದಿ