ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮತ್ತೊಮ್ಮೆ ಕುಸಿದ ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್

ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಮತ್ತೊಮ್ಮೆ ಕುಸಿದಿದ್ದು, ಸದ್ಯ ಬಾರಿ ಅನಾಹುತ ತಪ್ಪಿದೆ. ಅಲ್ಲದೆ ಬ್ರಿಡ್ಜ್ ಮೇಲಿನ ಸ್ಲ್ಯಾಬ್ ಪುಡಿಪುಡಿಯಾಗಿದ್ದು,ಆತಂಕದಲ್ಲಿ ವಾಹನ ಸವಾರರ ಸಂಚಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೆಲ‌ ಕಾಣಿಸುವ ಮಟ್ಟಕ್ಕೆ ಕಾಂಕ್ರಿಟ್ ಸ್ಲ್ಯಾಬ್ ಕಿತ್ತು ಹೋಗಿದೆ. ನಾಗರಬಾವಿಯಿಂದ ಗೋರಗುಂಟೆಪಾಳ್ಯಗೆ ಸಂಪರ್ಕಿಸುವ ರಸ್ತೆಯ ಬ್ರಿಡ್ಜ್ ಇದಾಗಿದ್ದು, ಬ್ರಿಡ್ಜ್ ಮೇಲಿನ ಸಿಮೆಂಟ್ ಕಲ್ಲುಗಳು ನೆಲಕ್ಕೆ ಬಿದ್ದಿದೆ. ಹೀಗಾಗಿ ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಇ‌ನ್ನು ವಾಹನ ಸವಾರರಿಗೆಂದು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಬ್ರಿಡ್ಜ್ ಕೆಳ ಭಾಗದ ರಸ್ತೆಯಿಂದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ೨೦೧೯ ರಲ್ಲಿಯೂ ಕುಸಿದಿದ್ದ ಸ್ಲ್ಯಾಬ್. ಆ ಸಮಯದಲ್ಲಿ ೬ ತಿಂಗಳು ಸುಮ್ಮನಹಳ್ಳಿ ಬ್ರಿಡ್ಜ್ ಬಂದ್ ಆಗಿತ್ತು. ಸ್ಲ್ಯಾಬ್ ಬಿದ್ದ ಪಕ್ಕದ ರಸ್ತೆಯಲ್ಲೇ ಪ್ರಧಾನಿ ಮೋದಿಗಾಗಿ ಗುಣಮಟ್ಟದ ಡಾಂಬರಿಕರಣ ಕೂಡ ಮಾಡಲಾಗಿತ್ತು. ಆದ್ರೆ ಈಗ ಸ್ಲ್ಯಾಬ್ ಬಿದ್ದ ರಸ್ತೆಗೆ ಡಾಂಬರಿಕರಣ ಮಾಡದೇ ನಿರ್ಲಕ್ಷ್ಯತೋರಿದ್ದಾರೆ. ಸಾಲದ್ದಕ್ಕೆ ಅರ್ಧ ರಸ್ತೆಯನ್ನ ಕವರ್ ಮಾಡಿ, ಬ್ಯಾರಿಕೇಡ್ ಅಳವಡಿಕೆ ಮಾಡಿರುವುದು ವಾಹನಸವಾರರ ಕೆಂಗಣ್ಣಿಗೆ ಕಾರಣವಾಗಿದೆ.

Edited By :
PublicNext

PublicNext

20/09/2022 05:58 pm

Cinque Terre

18.02 K

Cinque Terre

0

ಸಂಬಂಧಿತ ಸುದ್ದಿ