BBMPಯ ಯಲಹಂಕ ವಲಯದಲ್ಲಿಂದು ಬರೋಬ್ಬರಿ 96 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ 90,96,100,109,107 ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗ್ತಿದೆ.
ಅಬ್ಬಗೆರೆ ಕೆರೆಗೆ ಹೊಂದಿಕೊಂಡ ಜ್ಯೂಸ್ ಫ್ಯಾಕ್ಟರಿ ಸೇರಿ ಹಲವು ಕಟ್ಟಡಗಳಿಂದ ಒತ್ತುವರಿಯಾಗಿದೆ. ಜ್ಯೂಸ್ ಫ್ಯಾಕ್ಟರಿ ಒಳಗಡೆ ಇದ್ದ ರಾಜಕಾಲುವೆನ ಸಂಪೂರ್ಣ ಮುಚ್ಚಿ ಕಾಂಪೌಂಡ್ ಗೋಡೆ ನಿರ್ಮಿಸಿದ್ದರು. ಇದೀಗ ಜೆಸಿಬಿಗಳ ಮೂಲಕ ಒತ್ತುವರಿ ತೆರವುಗೊಳಿಸಲಾಗಿದೆ. ಈ ಎಲ್ಲಾ ವಿಷಯ ಕುರಿತು ತೆರವು ಕಾರ್ಯಾಚರಣೆ ಸ್ಥಳದಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ವರದಿ ಇಲ್ಲಿದೇ ನೋಡಿ..
PublicNext
14/09/2022 05:41 pm