ದೊಡ್ಡಬಳ್ಳಾಪುರ : ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಅರ್ಥಕ್ಕೆ ಸಂಪ್ ಕಾಮಾಗಾರಿ ನಿಂತು ಹೋಗಿದೆ, ಮೆಟ್ಟಿಲುಗಳ ಪಕ್ಕದಲ್ಲೆ ಇರುವ ಸಂಪ್ ಗಾಗಿ ತೆಗೆದಿರುವ ಅಪಾತಕಾರಿ ಹೊಂಡ ಮತ್ತು ಹೊಂಡದಲ್ಲಿರುವ ಕಬ್ಬಿಣದ ತಂತಿಗಳು ಸಾವಿಗೆ ಆಹ್ವಾನಿಸುವಂತಿದೆ.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮಾದಗೊಂಡನಹಳ್ಳಿ ರಸ್ತೆಯಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿದೆ, ನೂತನ ಕಾಲೇಜ್ ಗೆ ಬಂದರು ಕಾಲೇಜ್ ಕಟ್ಟಡದ ಉಳಿದ ಕಾಮಾಗಾರಿಗಳು ಈಗಲೂ ನಡೆಯುತ್ತಿದೆ, ಆದರೆ ಸಂಪ್ ನಿರ್ಮಾಣದ ಕಾಮಾಗಾರಿ ಅರ್ಧಕ್ಕೆ ನಿಂತಿದೆ, ಮೆಟ್ಟಿಲುಗಳ ಪಕ್ಕದಲ್ಲಿಯೇ ದೊಡ್ಡ ಗಾತ್ರದ ಹೊಂಡ ತೊಡಲಾಗಿದ್ದು, ಸಂಪ್ ನಿರ್ಮಾಣಕ್ಕಾಗಿ ಕಬ್ಬಿಣದ ಕಂಬಿಗಳನ್ನು ಹಾಕಿ ಆಗೆಯೇ ಬಿಡಲಾಗಿದೆ, ಒಂದು ವೇಳೆ ಮೆಟ್ಟಿಲುಗಳನ್ನ ಹತ್ತುವ ಧಾವಂತದಲ್ಲಿ ವಿದ್ಯಾರ್ಥಿಗಳು ಆಯಾತಪ್ಪಿ ಬಿದ್ದಾರೆ ಸಾವು ಸಂಭವಿಸುವುದು ಖಚಿತ.
ಕಾಲೇಜ್ ನಲ್ಲಿ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ನಿತ್ಯ ಓಡಾಡುವ ಜಾಗದಲ್ಲಿ ಸಂಪ್ ನಿರ್ಮಾಣದ ಸ್ಥಳ ಇದೆ, ಅಪಾಯಕಾರಿಯಾಗಿ ಬಾಯ್ದೆರೆದು ನಿಂತಿರುವ ಹೊಂಡ, ಹೊಡದಲ್ಲಿ ಚೂಪಾಗಿ ನಿಂತಿರುವ ಕಬ್ಬಿಣದ ಕಂಬಿಗಳು ಬಲಿಗಾಗಿ ಕಾದಿರುವಂತಿವೆ, ವಿದ್ಯಾರ್ಥಿಗಳ ಸುರಕ್ಷಿತೆಗಾಗಿ ಸಂಪ್ ಸುತ್ತ ತಡೆಗೋಡೆ ನಿರ್ಮಾಣ ಮಾಡುವ ಕನಿಷ್ಠ ಪ್ರಜ್ಞೆ ಸಹ ಇಲ್ಲಿನ ಕಾಲೇಜ್ ಆಡಳಿತಕ್ಕೆ ಇಲ್ಲ, ಅಪಾಯ ಸಂಭವಿಸುವ ಮುನ್ನ ಸಂಪ್ ಕಾಮಾಗಾರಿ ಪೂರ್ಣಗೊಳಿಸಲಿ ಇಲ್ಲ, ಸಂಪ್ ನಿರ್ಮಾಣದ ಸ್ಥಳದ ಸುತ್ತ ತಡೆ ಗೋಡೆಯನ್ನಾದ್ರು ನಿರ್ಮಾಣ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
20/09/2022 09:49 pm