ವರದಿ- ಬಲರಾಮ್ ವಿ
ಬೆಂಗಳೂರು : ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಸಂತೆ ಜಾಗದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಬಹುಮಹಡಿ ವಾಣಿಜ್ಯ ಕಟ್ಟಡ ಯೋಜನೆ ಕೈಬಿಡದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಎಚ್ಚರಿಸಿದ್ದಾರೆ.
ಕೆ.ಆರ್.ಪುರದಲ್ಲಿ ರೈತರು, ವ್ಯಾಪಾರಿಗಳ ಅಹವಾಲು ಆಲಿಸಿ ಮಾತನಾಡಿದ ಅವರು ಸಂತೆಗೆ ಬರುವ ರೈತರಿಗೆ ಬಿಬಿಎಂಪಿ, ಪೊಲೀಸರಿಂದ ದೌರ್ಜನ್ಯ ಹೆಚ್ಚಾಗಿದ್ದು, ರೈತರ ಹಿತ ರಕ್ಷಣೆಗೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಸಂತೆ ಮೈದಾನದಲ್ಲಿ 2008ರಲ್ಲಿ ನಂದೀಶ್ ರೆಡ್ಡಿ ಶಾಸಕರಾಗಿದ್ದಾಗ ₹150 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾಗ ಹಲವು ಹೋರಾಟ ಮಾಡಿ ಸಂತೆ ಜಾಗ ಉಳಿಸಿಕೊಂಡಿದ್ದೇವೆ. ಮತ್ತೆ ಕಟ್ಟಡ ನಿರ್ಮಿಸಲು ಯೋಜನೆ ತಂದಿದ್ದಾರೆ. ಇದರಿಂದ ಹಣ್ಣು ಮತ್ತು ತರಕಾರಿ ಹೂವಿನ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ’ ಎಂದು ರೈತ ಮಂಜುನಾಥ ಆರೋಪಿಸಿದರು.
PublicNext
14/09/2022 03:25 pm