ಬೆಂಗಳೂರು: ಅಪ್ರಾಪ್ತ ವಯಸ್ಸಿನ ಹುಡುಗರಿಗೆ ಬೈಕ್ ಕೊಡೋರು ಈ ಸ್ಟೋರಿ ನೋಡಲೇಬೇಕು. ತ್ರಿಬಲ್ ರೈಡಿಂಗ್ ಮಾಡಿ ಟ್ರಬಲ್ ಮಾಡಿಕೊಂಡ ಬಾಯ್ಸ್ ವಿಡಿಯೋ ವೈರಲ್ ಆಗ್ತಿದೆ. ಬೈಕ್ ಓಡಿಸಲು ಬಾರದೇ ಶೋಕಿ ಮಾಡೋಕೆ ಹೋದ್ರೆ ಹಿಂಗೆ ಆಗೋದು ಅಂತ ಜನ ಕೂಡ ಬಾಯಿ ತುಂಬಾ ಉಗಿಯುತ್ತಾ ಇದ್ದಾರೆ..
ತ್ರಿಬಲ್ ರೈಡಿಂಗ್‌ನಲ್ಲಿ ಹೋಗ್ತಿದ್ದ ಬೈಕ್ ಕಂಟ್ರೋಲ್ ಸಿಗದೇ ಬಾಲಕ ಬಿದ್ದಿದ್ದಾನೆ.. ಅತಿ ವೇಗಕ್ಕೆ ಹಿಂಬದಿಯಲ್ಲಿದ್ದವನು ರಸ್ತೆಯಲ್ಲಿ ಬಿದ್ದು ಎದ್ದೇಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಫ್ರೇಜರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಹೀಗೆ ವ್ಹೀಲಿಂಗ್ ಮಾಡೋದು ಇತರ ವಾಹನ ಸವಾರರಿಗೆ ಕಿರಿಕಿರಿ ಮಾಡೋದು ಇವರ ಪಾರ್ಟ್ ಟೈಮ್ ಕೆಲಸ ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಜನ ಆಗ್ರಹಿಸಿದ್ದಾರೆ.
PublicNext
11/01/2025 07:36 pm