ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ರಾಜ್ಯದಲ್ಲಿ ಮೊದಲ ಮಾದರಿ ಕಸ ವಿಲೇವಾರಿ ಘಟಕ: ನಗರ ಜಿಲ್ಲಾಧಿಕಾರಿ ಮಂಜುನಾಥ್

ಯಲಹಂಕ: ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳಿಗೆ ಸವಾಲು. ಈ ಸವಾಲನ್ನೆ ಸಾಧನೆ ಮಾಡಿಕೊಂಡು ನಗರಜಿಲ್ಲೆ ಯಲಹಂಕ ತಾಲೂಕಿನ ಅರಕೆರೆ ಗ್ರಾಮ ಪಂಚಾಯ್ತಿಯು ರಾಜ್ಯದಲ್ಲೆ ಮೊದಲ ಮಾದರಿ‌ ಕಸ ವಿಲೇವಾರಿ ಘಟಕ ನಿರ್ಮಿಸಿದೆ. ಈ ಬಗ್ಗೆ ಪಬ್ಲಿಕ್ ‌ನೆಕ್ಸ್ಟ್ ಸಹ ವಿಶೇಷ ವರದಿ ಮಾಡಿತ್ತು.

ಮಾದರಿ ಕಸವಿಲೇವಾರಿ ಘಟಕ ಕೆಲವು ದಿನಗಳ ಹಿಂದೆ ಜನಸೇವೆಗೆ ಲೋಕಾರ್ಪಣೆಯಾಗಿದೆ.ಇಂತಹ ಘಟಕದ ವೀಕ್ಷಣೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ರವರು ಭೇಟಿ ನೀಡಿದರು.

ಎರಡು ಎಕರೆ ಪ್ರದೇಶದಲ್ಲಿನ ಉದ್ಯಾನವನ, ಎತ್ತುಗಳು, ಎತ್ತಿನ ಬಂಡಿ, 42 ಬಗೆಯ ಕಸ ವಿಂಗಡಣಾ ವಿಭಾಗಗಳು, ವನೌಷಧ ಗಿಡ, ಎರೆಹುಳು ಗೊಬ್ಬರ ಘಟಕ ಹೀಗೆ ಮಾದರಿ ಕಸ ವಿಲೇವಾರಿ ಘಟಕ ವಿಭಿನ್ನ ಉದ್ಯಾನವಾಗಿ, ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ.

ಇದೇ ವೇಳೆ ನಗರ ಜಿಲ್ಲಾಧಿಕಾರಿ ಮಾತನಾಡಿ, ಮಾದರಿ ಘಟಕ‌ BBMPಗೆ ಮತ್ತು ರಾಜ್ಯಕ್ಕೆ ಮಾದರಿಯಾಗಿದೆ.ಇಂತಹ ಘಟಕ ನಿರ್ಮಾಣದ ಹಿಂದಿನ ಎಲ್ಲರಿಗೂ ಅಭಿನಂದನೆಗಳು ಎಂದರು. ಜಿಲ್ಲಾಧಿಕಾರಿ ಜೊತೆ ಬೆಂಗಳೂರು ಉತ್ತರ ವಿಭಾಗದ A.C ಹಾಗೂ ಬೆಂಗಳೂರು BBMPಯ ಜಂಟಿ ಆಯುಕ್ತರು ಜಿಲ್ಲಾಧಿಕಾರಿ ಜೊತೆ ಕಸ ವಿಲೇವಾರಿ ಘಟಕ ವೀಕ್ಷಿಸಿದರು.

Edited By : Manjunath H D
Kshetra Samachara

Kshetra Samachara

05/02/2022 10:33 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ