ಬೆಂಗಳೂರು: ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಹೃದಯ ದಿನದ ಪ್ರಯುಕ್ತ ಸ್ಪಂದನ ಸೂಪರ್ ಸ್ಪೆಷಾಲಿಟಿ ವತಿಯಿಂದ ವಾಕಾಥನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇನ್ನು ಆನೇಕಲ್ ತಾಲೂಕಿನ ಸೋಂಪುರ ಗೇಟ್ ಬಳಿಯಿಂದ ಸರ್ಜಾಪುರದ ವರಗೆ 5 km ವಾಕಾಥನ್ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಮೆಡಿಕಲ್ ವಿದ್ಯಾರ್ಥಿಗಳು ಜೊತೆಗೂಡಿ ಪ್ರಮುಖ ಬೀದಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿದರು. ಇನ್ನು ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ ಮತ್ತು ತಂಬಾಕು ಸೇವನೆಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ ವ್ಯಕ್ತಿಯೋರ್ವ ಶೇ.80ರಷ್ಟು ಅಕಾಲಿಕ ಮರಣದ ಸಂಭವವನ್ನು ತಡೆಗಟ್ಟಬಹುದು ಎಂದು ಜನರಿಗೆ ಅರಿವು ಮೂಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.
PublicNext
29/09/2022 03:42 pm