ಬೆಂಗಳೂರು: ಒತ್ತಡದ ಜೀವನ. ಸದಾ ಕೆಲಸದ ಬ್ಯೂಜಿ. ಲೇಟ್ ನೈಟ್ ಪಾರ್ಟಿಗಳು, ಫಾಸ್ಟ್ ಪುಡ್ ಅಹಾರ ಸೇವನೆ. ಇದು ಇತ್ತೀಚಿಗೆ ಬೆಂಗಳೂರು ಜನರ ಜೀವನ ಶೈಲಿ. ಇವು ಸೇರಿದಂತೆ ಇಂದಿನ ಜನರ ಲೈಪ್ ಸ್ಟೈಲ್ ನಿಂದಾಗಿ ಯುವಕರಲ್ಲಿ ಇತ್ತೀಚಿಗೆ ಹೃದಯ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗ್ತಿವೆ. ಈ ಬಗ್ಗೆ ಬೆಂಗಳೂರಿಗರಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಮಣಿಪಾಲ್ ಆಸ್ಪತ್ರೆಯವರು ಜಂಟಿಯಾಗಿ ಹೊಸದೊಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದಕ್ಕಾಗಿ ಬೆಂಗಳೂರಿನ ಪ್ರಮುಖ ಹದಿನೈದು ಸಿಗ್ನಲ್ ಗಳನ್ನು ಆಯ್ಕೆ ಮಾಡಲಾಗಿದ್ದು, ಸಿಗ್ನಲ್ ರೆಡ್ ಸಿಗ್ನಲ್ ಬೀಳುವ ವೇಳೆ ಹಾರ್ಟ್ ಶೇಪ್ ಇರಲಿದೆ. ಇದೇ ತಿಂಗಳ ಹತ್ತರಿಂದ 25ನೇ ತಾರೀಖಿನ ವರೆಗೆ ಇದೇ ಮಾದರಿಯಲ್ಲಿ ಹಾರ್ಟ್ ಸಿಗ್ನಲ್ ಗಳು ಇರಲಿವೆ.
ಬರೇ ಇಷ್ಟೇ ಅಲ್ದೇ, ಸಿಗ್ನಲ್ ನಲ್ಲಿ ಆಸ್ಪತ್ರೆ ವತಿಯಿಂದ ಹೃದಯದ ಬಗ್ಗೆ ಕಾಳಜಿ ವಹಿಸಿ ಅನ್ನೋ ಬ್ಯಾನರ್, ಬಿತ್ತಿ ಪತ್ರಗಳು ಹಿಡಿದು ಪ್ರದರ್ಶನ ಮಾಡಲಿದ್ದಾರೆ. ಸಿಗ್ನಲ್ ನಲ್ಲಿ ಈ ರೀತಿಯ ಜಾಗೃತಿ ಮೂಡಿಸುವ ಮೂಲಕ, ಜನರಿಗೆ ಹೃದಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಅನ್ನೋ ಬಗ್ಗೆ ತಿಳುವಳಿಕೆ ಮೂಡಿಸಲಿದ್ದಾರೆ. ಈಗಾಗಲೇ ನಗರದ ಮಹಾತ್ಮ ಗಾಂಧಿ ಸರ್ಕಲ್, ಮಿನ್ಸ್ಕ್ ಸ್ಕ್ವೇರ್ ನಲ್ಲಿ ಸಿಗ್ನಲ್ ರೂಪದಲ್ಲಿ ಹೃದಯ ಮಿನುಗ ತೊಡಗಿದೆ.
ಸದಾ ಫೈನ್, ರೂಲ್ಸ್ ಬ್ರೇಕ್ ಅನ್ನೋ ಪೊಲೀಸರು, ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸ್ತಿರೋದು ನಿಜಕ್ಕೂ ಖುಷಿಯ ವಿಚಾರ.
PublicNext
12/10/2022 08:47 pm