ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲು ರವರ ಗೈರಿನಲ್ಲಿ ವಿದ್ಯುತ್ ಚಾಲಿತ ಅಸ್ತ್ರ ಬಸ್‌ಗಳ ಲೋಕಾರ್ಪಣೆ ನೆರವೇರಿತು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಎಂಟಿಸಿ ಎಂ.ಡಿ ಶ್ರೀಮತಿ ಶಿಖಾ ರವರ ಉಪಸ್ಥಿತಿಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಲೋಕಾರ್ಪಣೆಯನ್ನು ವರ್ಚುವಲ್ ಮೂಲಕ ನೆರವೇರಿಸಲಾಯ್ತು.
ಕೇಂದ್ರ ಸಾರಿಗೆ ಇಲಾಖೆ ಮತ್ತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ಇದೇ ವೇಳೆ ಯಲಹಂಕದ ಪುಟ್ಟೇನಹಳ್ಳಿ ಡಿಪೋ 30ರಲ್ಲಿ 100ಬಸ್‌ಗಳು ಕಾರ್ಯನಿರ್ವಹಿಸಲಿವೆ. ಇದು ನಮ್ಮ ಯಲಹಂಕ ಮತ್ತು ಬೆಂಗಳೂರಿಗೆ ಹೆಮ್ಮೆ. ಈ ಸೇವೆಯನ್ನ ಜನ ಪಡೆದುಕೊಳ್ಳಬೇಕು ಎಂದು ವಿಶ್ವನಾಥ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.
ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವಿದ್ಯುತ್ ಚಾಲಿತ ಬಸ್‌ಗಳು ಇಂದಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಸೇವೆಗೆ ಸಿಗಲಿವೆ. ಜನತೆ ಬಸ್‌ಗಳ ಸೇವೆ ಪಡೆದುಕೊಳ್ಳಬೇಕು. ಸ್ವಿಚ್ ಸಂಸ್ಥೆ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡು 85ಲಕ್ಷ ಬೆಲೆಯ 300 ಬಸ್‌ಗಳು ಇಂದಿನಿಂದ ಕಾರ್ಯ ನಿರ್ವಹಿಸಲಿವೆ.
ಕಿ.ಮೀ.48ರುಪಾಯಿನ ಬಿಎಂಟಿಸಿ ಸ್ವಿಚ್ ಸಂಸ್ಥೆಗೆ ನೀಡಲಿದೆ. ಬೆಂಗಳೂರಿನಲ್ಲಿ ಯಲಹಂಕ, ಬಿಡದಿ ಮತ್ತು ಚನ್ನಸಂದ್ರ ಮೂರು ಡಿಪೊಗಳಿಂದ ತಲಾ 100 ಬಸ್, ಒಟ್ಟು 300 ಬಸ್ ಸಂಚರಿಸಲಿವೆ. ಪರಿಸರ ಸ್ನೇಹಿ ಐಷಾರಾಮಿ ವಿದ್ಯುತ್ ಚಾಲಿತ ಬಸ್‌ಗಳು ಜನಸೇವೆ ಒದಗಿಸಲಿವೆ ಎಂದು ಬಿಎಂಟಿಸಿ ಎಂ.ಡಿ. ಶಿಖಾರವರು ತಿಳಿಸಿದರು.
40ಜನ ಪ್ರಯಾಣಿಕರು ಪ್ರಯಾಣಿಸಬಹುದಾದ ಬಸ್ ಒಂದು ಸರಿ ವಿದ್ಯುತ್ ಚಾರ್ಜ್ ಮಾಡಿಕೊಂಡರೆ 180ಕಿ.ಮೀ. ಸಂಚರಿಸಬಹುದು. ವಾಯು ಮಾಲಿನ್ಯವಿಲ್ಲದ ಬಸ್ ಬೆಂಗಳೂರು ಜನಕ್ಕೆ ಉತ್ತಮ ಸೇವೆ ಒದಗಿಸಲಿ. ಆ ಮೂಲಕ ಸಂಚಾರ ದಟ್ಟಣೆ ಕಡಿಮೆಯಾಗಲಿ ಎಂದು ಹೇಳಿದರು.
PublicNext
07/10/2022 04:22 pm