ಗಡಿ ಭದ್ರತಾ ಪಡೆ ಬೆಂಗಳೂರಿನ ಯಲಹಂಕದ ಎಸ್‌ಟಿಸಿ ವಿಭಾಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸಾಧನೆ ಮಾಡಿರುವ ದಕ್ಷಿಣ ವಲಯದ 12ಜನ ರಾಷ್ಟ್ರಪತಿ ಪದಕ ಸಂದಿದೆ. ಇಂತಹ ಸಾಧಕರನ್ನು ಪಡೆದಿರುವ ಬೆಂಗಳೂರಿನ ಯಲಹಂಕದ ಎಸ್‌ಟಿಸಿ ಸೆಂಟರ್‌ನಲ್ಲಿ ನಿನ್ನೆ ಸೋಮವಾರ ನಿಸ್ವಾರ್ಥ ಸೇವಕರಿಗೆ ಪದಕ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿತು. ಯಲಹಂಕದ ಇನ್ಸ್‌ಪೆಕ್ಟರ್ ಜನರಲ್ ಎಸ್.ಟಿ.ಸಿ- ಬಿಎಸ್ಎಫ್ ಪುನೀತ್ ರಸ್ತೋಗಿ, ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇನ್ಸ್‌ಪೆಕ್ಟರ್ ಜನರಲ್ ಎಸ್.ಟಿ.ಸಿ- ಬಿಎಸ್ಎಫ್ ,, ಬೆಂಗಳೂರಿನ ಜಾರ್ಜ್ ಮಂಜುರನ್ ಲ ಎಸ್.ಟಿ.ಸಿ- ಬಿಎಸ್ಎಫ್ ರವರು ರಾಷ್ಟ್ರಪತಿ ಪದಕ ವಿಜೇತರಿಗೆ ಸನ್ಮಾನ ನೆರವೇರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ರಾಷ್ಟ್ರಪತಿ ಪದಕ ವಿಜೇತರ ವಿವರ:-
**ಶ್ರೀ ಜಾಕೋಬ್ ಕೋಶಿ-ನಿವೃತ್ತ. ಎ.ಸಿ
** ಅತಾಹುಲ್ಲಾ ಅಜ್ಮ:-
**ಜಬರಾಜ್.ಡಿ:-ನಿವೃತ್ತ. ಎ.ಸಿ
** ಜಬರಾಜ್:-ನಿವೃತ್ತ ಇನ್ಸ್ಪೆಕ್ಟರ್
**ಕನಕನಾಥ್:- ನಿವೃತ್ತ ಇನ್ಸ್ಪೆಕ್ಟರ್
** ರವಿ.ಎಂ. ನಿವೃತ್ತ ಇನ್ಸ್ಪೆಕ್ಟರ್
** ಮೋಹನಕುಮಾರ:- ನಿವೃತ್ತ ಇನ್ಸ್ಪೆಕ್ಟರ್
**B ಅರುಳ್ ದಾಸ್.:-ನಿವೃತ್ತ ಎಸ್.ಐ
**ಮಧುಸೂದನನ್. ಡಿ.ಸಿ.
** ಮುರಳಿಅ್ ಮೀನಾ. ಎ.ಸಿ.
** S.M.ಮೂರ್ತಿ, ಎ.ಸಿ/ ಮಿನಿ,
** ನಾಗರಾಜನ್, ಎ.ಸಿ/ ಮಿನಿ,
*" ರಣಭೀರ್ ಸಿಂಗ್ ತೋಮರ್, ಇನ್ಸ್ಪೆಕ್ಟರ್
ಇವರುಗಳಿಗೆ ಗೌರವಪೂರ್ಣ ರಾಷ್ಟ್ರಪತಿ ಪದಕಗಳನ್ನು ವಿತರಿಸಿ ಗೌರವಿಸಲಾಯ್ತು. ಇದೇ ವೇಳೆ ಮಾತನಾಡಿದ ಐ.ಜಿ. ಪುನೀತ್ ರಸ್ತೋಗಿ ಬಿಎಸ್ ಎಫ್ ನಲ್ಲಿ ಸೇವೆ ನಿಸ್ವಾರ್ಥ ಸಲ್ಲಿಸುತ್ತಿರುವ ಸಾಧಕರಿಗೆ ಪದಕ ಸಿಗುವುದರ ಹಿಂದೆ, ಕುಟುಂಬಗಳ ಶ್ರಮ ಬಲಿದಾನ ಇದೆ ಎಂದರು.
PublicNext
20/09/2022 12:48 pm