ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸುರಕ್ಷತಾ ಶಾಖೆಯು ಗುಂಟೂರಿನ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್‌ಡಿಆರ್‌ಎಫ್) 10 ನೇ ಬೆಟಾಲಿಯನ್ ಸಹಯೋಗದಲ್ಲಿ ನಗರದ ಯಶವಂತಪುರ ಯಾರ್ಡ್‌ನಲ್ಲಿ ಪೂರ್ಣ ಪ್ರಮಾಣದ ಅಪಘಾತದ ಅಣಕು ಕಾರ್ಯಾಚಾರಣೆ ನಡೆಸಿತು.
ಎನ್‌ಡಿಆರ್‌ಎಫ್‌ನ ಸಹಾಯಕ ಕಮಾಂಡ್ ಶ್ರೀ ಜೆ.ಸೆಂಥಿಲ್ ಕುಮಾರ್ ನೇತೃತ್ವದ ಎನ್‌ಡಿಆರ್‌ಎಫ್ ತಂಡವು 25 ರಕ್ಷಕರು ಮತ್ತು ಇತರ ಪಾಲುದಾರರು, 108 ಆಂಬ್ಯುಲೆನ್ಸ್, ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್, ಎಲೆಕ್ಟ್ರಿಕಲ್, ಆರ್‌ಪಿಎಫ್ ಸಿಬ್ಬಂದಿಯನ್ನು ಒಳಗೊಂಡ ರೈಲ್ವೆ ಸಿಬ್ಬಂದಿ ಜಂಟಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಎನ್‌ಡಿಆರ್‌ಎಫ್ ತಂಡ ಮತ್ತು ರೈಲ್ವೇ ಸಿಬ್ಬಂದಿ ಅಣಕು ಪ್ರದರ್ಶನದ ಸ್ಥಳದ ಬಳಿ ವೈದ್ಯಕೀಯ ಮತ್ತು ಸಲಕರಣೆಗಳ ಟೆಂಟ್‌ಗಳನ್ನು ನಿರ್ಮಿಸಿ ಉಪಕರಣಗಳನ್ನು ಪ್ರದರ್ಶಿಸಲು ಮತ್ತು ಕೋಚ್‌ನಿಂದ ತೆಗೆದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿದರು.
PublicNext
21/09/2022 03:44 pm