ನೆಲಮಂಗಲ: ಶತಮಾನಗಳ ಇತಿಹಾಸ ಹೊಂದಿರೋ ಚೋಳರ ಕಾಲದಿಂದಲೂ ಮಳೆಯಿಂದ ಕೆರೆ ತುಂಬಿ ಕೋಡಿ ಹರಿದ ಸಂದರ್ಭ ನೆಲಮಂಗಲದ ಟಿ. ಬೇಗೂರು ಗ್ರಾಮದ ದೊಡ್ಡಕೆರೆಯಲ್ಲಿ ಶ್ರೀದೇವಿ- ಭೂದೇವಿ ಸಮೇತ ಶ್ರೀ ಕರಿತಿಮ್ಮರಾಯ ಸ್ವಾಮಿಯ ಅದ್ಧೂರಿ ತೆಪ್ಪೋತ್ಸವ ಜರುಗುತ್ತಿತ್ತು.
ಆ ವೈಭವದ ಮಹೋತ್ಸವ ಈಗಲೂ ಮುಂದುವರಿಯುತ್ತಾ ಬರುತ್ತಿದ್ದು, ಪ್ರತಿವರ್ಷ ಮಳೆಯಾಗಿ ಕೆರೆ ತುಂಬಿ ಕೋಡಿ ಹರಿದ ವೇಳೆ ಶ್ರೀ ಕರಿತಿಮ್ಮರಾಯ ಸ್ವಾಮಿಯನ್ನೇ ಮನೆದೇವರನ್ನಾಗಿಸಿಕೊಂಡ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ರಾಜ್ಯದ ನಾನಾ ಕಡೆಗಳಿಂದ ಬರುವ ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿಶೇಷ ಅಂದ್ರೆ, ದೇವಾಲಯದಿಂದ ಮೆರವಣಿಗೆ ಹೊರಟ ಉತ್ಸವ ಮೂರ್ತಿ, ಕೆರೆಯಲ್ಲಿನ ತೆಪ್ಪದ ಬಳಿ ಬಂದು ಪೂಜೆ ವೇಳೆಗೆ ಸರಿಯಾಗಿ ದೇವರ ಕೃಪಾಶೀರ್ವಾದ ಎಂಬಂತೆ ಮಳೆಯಾಗುತ್ತೆ!
ಪ್ರತಿವರ್ಷ ಮಳೆಯಾದಾಗ ನಡೆಯುವ ದೇವರ ತೆಪ್ಪೋತ್ಸವದಲ್ಲಿ ಜನರು ಕುಟುಂಬ ಸಹಿತ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಆದ್ರೆ, ಕಳೆದೆಂಟು ವರ್ಷಗಳಿಂದ ಮಳೆ ಬಾರದೇ ಊರಿನಲ್ಲಿ ತೆಪ್ಪೋತ್ಸವ ನಡೆದಿರಲಿಲ್ಲ.
ಈ ಸಲ ಹೆಚ್ಚು ಮಳೆ ಆಗಿದ್ರಿಂದ ಮತ್ತೆ ಕೆರೆ ಕೋಡಿ ಹರಿದು ದೇವರ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಊರಿನಲ್ಲಿ ಒಂದು ರೀತಿ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಅದನ್ನು ನೋಡಲು ನಮಗೆ ತುಂಬಾ ಸಂತೋಷವಾಗುತ್ತೆ ಅಂತಾರೆ ಭಕ್ತರು. ಒಟ್ಟಾರೆ ಈ ಬಾರಿ ಭರ್ಜರಿ ಮಳೆಯಿಂದ ಕೆರೆ- ಕುಂಟೆಗಳು ತುಂಬಿ ಕೋಡಿ ಹರಿಯುತ್ತಿದ್ದು, ದೇವರ ಸೇವಾ ಕೈಂಕರ್ಯಗಳನ್ನೂ ನೆರವೇರಿಸ್ತಿರೋ ಜನರಲ್ಲಿ ಹರ್ಷೋಲ್ಲಾಸ ಮನೆಮಾಡಿದೆ.
-ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
PublicNext
09/10/2022 10:24 pm