ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಭವನದಲ್ಲಿ ಸತ್ಯ ಮತ್ತು ಅಹಿಂಸಾ ಮಹೋತ್ಸವ: ಮಹಾತ್ಮ ಗಾಂಧೀಜಿಗೆ ಗೀತನಮನ

ಬೆಂಗಳೂರು: ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧೀಜಿರವರ ಜನ್ಮದಿನದ ಅಂಗವಾಗಿ ರಾಜಭವನದ ಗಾಜಿನಮನೆಯಲ್ಲಿ ರಾಜಭವನ, ದೂರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಿಬಿಎಂಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಗಾಂಧಿ ಜಯಂತಿ ಸತ್ಯ ಮತ್ತು ಅಹಿಂಸಾ ಮಹೋತ್ಸವ”ದಲ್ಲಿ ನೃತ್ಯ ಹಾಗೂ ಗೀತೆಗಳ ಮೂಲಕ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಲಾಯಿತು.

ಮೊದಲಿಗೆ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸತ್ಯ ಮತ್ತು ಅಂಹಿಸೆ ಕುರಿತು ಗಾಂಧೀಜಿಯ ನಿಲುವನ್ನು ನಿರೂಪಕರು ಸ್ಮರಿಸಿದರು. ನಂತರ ಗಾಂಧೀಜಿಯವರ ಇಷ್ಟದ “ ವೈಷ್ಣವ ಜನತೋ...” ಮತ್ತು ರಘುಪತಿ ರಾಘವ ರಾಜ ರಾಮ್“ ಭಜನೆಯನ್ನು ದೀಪಿಕಾ ಶ್ರೀಕಾಂತ್ ಅವರ ತಂಡ ಪ್ರಸ್ತುತ ಪಡಿಸಿತು.ಪ್ರಭಾತ್ ಆರ್ಟ್ ಇಂಟರ್‌ನ್ಯಾಷನಲ್ ತಂಡವು ವತಿಯಿಂದ ಬೇಲೂರು ಹಳೇಬೀಡು ವಿಷಯದಾರಿತ ನೃತ್ಯ ರೂಪಕ ಪ್ರದರ್ಶನ ಅದ್ಭುತವಾಗಿ ಮೂಡಿ ಬಂತು.ಸತ್ಯ, ಅಹಿಂಸೆ ಮತ್ತು ಶಾಂತಿಯನ್ನು ಅಸ್ತ್ರವಾಗಿ ಬಳಸಿ ಹೋರಾಟ ನಡೆಸಿದ ಗಾಂಧೀಜಿಯವರಿಗೆ ನಿನಾದ ಅಕಾಡೆಮಿಯಿಂದ ಸ್ವಾತಂತ್ರ್ಯ ಚಳುವಳಿಯ ನೃತ್ಯಗೌರವ ಸಲ್ಲಿಸಿದರು.

ಲಕ್ಷ್ಮಣ ನೇತೃತ್ವದ ನೆಲಸೊಗಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅವರಿಂದ "ಗಾಂಧಿ ಸ್ವತಂತ್ರ ಭಾರತಕ್ಕೆ ನಾಂದಿ" ನೃತ್ಯ ನಾಟಕ ಪ್ರದರ್ಶಿಸಿ ಪ್ರಪಂಚವೆಲ್ಲಾ ನಮ್ಮ ಕುಟುಂಬದವರು ಎಂಬ ಸಂದೇಶ ಸಾರಿದರು. ಆಳ್ವ ಎಜುಕೇಶನ್ ಸಂಸ್ಥೆ ವತಿಯಿಂದ ಆಂಧ್ರ ಪ್ರದೇಶದ ಶೈಲಿಯ ಬಂಜಾರ ಜಾನಪದ ಶೈಲಿಯ ಹಾಗೂ ಕತಕ್ ಶೈಲಿ ಪಶ್ಚಿಮ ಬಂಗಾಳದ ನೃತ್ಯ ಪ್ರದರ್ಶನ ನೆರೆದವರ ಮನ ಗೆದ್ದಿತು. ಅಂತಿಮವಾಗಿ ನೇಹಾ ಸುಲ್ಲದ್ ಅವರಿಂದ "ಗಣಪತಿ ಕವಿತ್ವಂ" ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ವಿಡಿಯೋ: ರಾಜಭವನ

Edited By : Shivu K
PublicNext

PublicNext

03/10/2022 08:38 am

Cinque Terre

26.41 K

Cinque Terre

0

ಸಂಬಂಧಿತ ಸುದ್ದಿ