ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಸರ್ಕಾರಿ ಮಾದರಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ತಾಲೂಕಿನ ಹತ್ತಾರು ಶಾಲೆಗಳ ಮಕ್ಕಳು ತಮ್ಮ ಕೌಶಲ್ಯ ಮೆರೆದರು.
ಆದರೆ ಸೂಲಿಬೆಲೆ ಶಾಲೆಯ 7ನೇ ತರಗತಿಯ ಗಗನ್ ತೇಜ್ ತೊಟ್ಟಂತಹ ಶ್ರೀವೆಂಕಟರಮಣ ದೇವರ ವೇಷಭೂಷಣ ತೀರ್ಪುಗಾರರ ಗಮನ ಸೆಳೆಯಿತು. ತಾಲೂಕು ಮಟ್ಟದಿಂದ ಮೊದಲಿಗನಾಗಿ ಗಗನ್ ತೇಜ್ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇದರಿಂದ ಸೂಲಿಬೆಲೆ ಶಾಲೆ ಮತ್ತು ಪೋಷಕರು ಸಖತ್ ಖುಷಿಯಾಗಿದ್ದಾರೆ..
Kshetra Samachara
24/09/2022 04:52 pm