ಆನೇಕಲ್: ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಶಾಲೆಯಲ್ಲಿ ಇಂದು ರಾಜಲಾಂಛನ ಸಂಸ್ಥೆ ಚಂದಾಪುರ ಘಟಕ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ ಲಾಂಛನ ಸಂಸ್ಥೆಯ ಚಂದಾಪುರ ಘಟಕದ ವಸಂತ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇನ್ನು ಕಳೆದ ಬಾರಿ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ..
ಬೆಸ್ಟ್ ಆಸ್ಪತ್ರೆಯ ಮಾಲೀಕರಾದ ವಿಜಯ ರಾಘವ ರೆಡ್ಡಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ನೆರವೇರಿಸಿದರು. ಇನ್ನು ರಾಜ ಲಾಂಛನ ಸಂಸ್ಥೆಯ ವಸಂತ್ ಕುಮಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಾಕಷ್ಟು ಹಿಂದುಳಿದಿದೆ ಅವರನ್ನು ಮೇಲೆ ಎತ್ತುವ ಕೆಲಸ ನಾವು ಮಾಡ್ತಿದ್ದೇವೆ ಶಿಕ್ಷಣ ತುಂಬಾ ಮಹತ್ವವಾದದ್ದು ಶಿಕ್ಷಣದಿಂದ ಯಾರು ಕೂಡ ವಂಚಿತರಾಗಬೇಡಿ ನಮ್ಮ ಸಂಸ್ಥೆ ವತಿಯಿಂದ ಶಿಕ್ಷಣಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ ಮಾಡುತ್ತಿರುವ ಉದ್ದೇಶವೇ ಇದು.
ಹಾಗಾಗಿ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಮಕ್ಕಳ ಉದ್ದೇಶಿಸಿ ಮಾತನಾಡಿದರು ಇನ್ನು ಕಾರ್ಯಕ್ರಮದಲ್ಲಿ ವಿಜಯ ರಾಘವ ರೆಡ್ಡಿ ರಾಜಲಾಂಛನ ಸಂಸ್ಥೆ ಉಪಾಧ್ಯಕ್ಷ ರು ಬೆಸ್ಟ್ ಆಸ್ಪತ್ರೆಯ ಮಾಲೀಕರು ಮಂಜುನಾಥ್ ಕಾರ್ಯದರ್ಶಿ ಲಿಂಗಣ್ಣ ಶೇಖರ್ ಓಂಕಾರ ,ಅಡವಪ್ಪ ಸಂತೋಷ, ಸಂತೋಷ ಪಾಟೀಲ್ ಅಂಜಿನಪ್ಪ ಬಸವರಾಜು ರಘು,ರಾಣಿ ರಾಘವೇಂದ್ರ ಸುಮಿತ್ರಾ ಹಾಗು ಸರ್ಕಾರಿ ಶಾಲಾ ಶಿಕ್ಷಕರು ಭಾಗಿಯಾಗಿದ್ದರು.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
24/09/2022 04:47 pm