ಬೆಂಗಳೂರು : ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದ ದಸರಾ ಪ್ರದರ್ಶನದ ಗೊಂಬೆಗಳಿಲ್ಲಿ ಜೀವಕಳೆ ಪಡೆದಿವೆ. ಜೊತೆಗೆ ಲಲಿತಾ ಸಹಸ್ರನಾಮ, ನಾಡದೇವತೆ ಚಾಮುಂಡೇಶ್ವರಿ ಪೂಜೆ ನಮ್ಮನ್ನ ನಮ್ಮ ಗತವೈಭವಕ್ಕೆ ಕರೆದೊಯ್ದಿತ್ತು.
ದಸರಾ ಬಣ್ಣದ ಗೊಂಬೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿವೆ. ಇಂತಹ ಅತ್ಯುತ್ತಮ ದಸರಾ ಗೊಂಬೆ ಪ್ರದರ್ಶನ ನಡೆದದ್ದು ಬೆಂಗಳೂರಿನ ಯಲಹಂಕ ವಿಶ್ವವಿದ್ಯಾಪೀಠ ಶಾಲೆಯಲ್ಲಿ. ರಾಮಾಯಣ- ಮಹಾಭಾರತ ಮತ್ತು ಬದುಕನ್ನು ಕಟ್ಟಿಕೊಟ್ಟ ಗೊಂಬೆ ಪ್ರದರ್ಶನ ಮತ್ತು ದುರ್ಗಾಪೂಜೆ ವರ್ಣನೆ ಪದಗಳಿಗೆ ನಿಲುಕದ್ದು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ, ನಮ್ಮ ದೇಶದ ವಿವಿಧ ಕಡೆಗಳಿಂದ ಲಕ್ಷಾಂತರ ಜನ ಮೈಸೂರಿಗೆ ಭೇಟಿಕೊಡ್ತಾರೆ. ನಮ್ಮ ಪೂರ್ವದ ಸಂಸ್ಕೃತಿಯ ದಿಗ್ದರ್ಶನ ಪಡೆದು ಪುಳಕಗೊಳ್ತಾರೆ. ಅಂತದ್ದೆ ಸಾರ್ಥಕ ಕೆಲಸವನ್ನು, ಮೂರು ತಲೆಮಾರುಗಳ ಗೊಂಬೆ ಪ್ರದರ್ಶನ ಏರ್ಪಡಿಸಿ, ದೇವತೆ ಚಾಮುಂಡೇಶ್ವರಿ ಕುರಿತು ಲಲಿತಾ ಸಹಸ್ರನಾಮ ಪಠನೆಗೆ ಅವಕಾಶಕೊಟ್ಟಿದ್ದಕ್ಕೆ ಯಲಹಂಕದ ನಾರಿಯರು ವಿಶ್ವವಿದ್ಯಾಪೀಠ ಶಾಲೆಗೆ ಧನ್ಯವಾದ ಅರ್ಪಿಸಿದ್ದಾರೆ.
ಸಾಂಸ್ಕೃತಿಕ ಶ್ರೀಮಂತಿಕೆಯ ಭಾರತದಲ್ಲಿ ಹಬ್ಬಗಳಿಗೆ, ಆದರ್ಶಗಳಿಗೆ ಕೊರತೆ ಇಲ್ಲ. ಆದರೆ ನಮ್ಮ ಶ್ರಷ್ಠತೆ, ಅದರ ಮಹತ್ವವನ್ನು ನಮ್ಮ ಮಕ್ಕಳಿಗೆ ಕಲಿಸಿ, ತಿಳಿಸಿ ವಿಶ್ವಕ್ಕೆ ಬೆಳಾಕಾಗುವತ್ತ ನಾವು ಹೆಜ್ಜೆ ಇಡಬೇಕಿದೆ.
PublicNext
28/09/2022 01:48 pm