ಆನೇಕಲ್: ಹದಿಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ವಿಜಯಕುಮಾರ್‌ನನ್ನ ಪೋಕ್ಸ್ ಕಾಯ್ದೆ ಅಡಿ ಬಂಧಿಸಲಾಗಿದೆ..
ಗುಲ್ಬರ್ಗ ಮೂಲದ ಬಾಲಕಿ ೧೩ ವರ್ಷದ ನವ್ಯ ದಸರಾ ಹಬ್ಬ ರಜೆ ಇದ್ದ ತಂದೆ ತಾಯಿಯನ್ನು ನೋಡಲು ಬಂದಿದ್ದರಂತೆ. ಪಕ್ಕದ ನೆರೆಮನೆಯ ವಿಜಯಕುಮಾರ್ ಪರಿಚಯ ಆಗಿದ್ದನಂತೆ, ತಂದೆ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಈಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ.
ಕೂಡಲೇ ತಂದೆ ತಾಯಿ ಹೆಬ್ಬಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದರು. ಬಳಿಕ ವಿಜಯ್ ಕುಮಾರ್‌ನ್ನ ಪೊಲೀಸ್ರು ಬಂಧಿಸಿ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಮಾಡಲು ಕಳಿಸಲಾಯಿತು ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ..
PublicNext
11/10/2022 06:09 pm