ಬೆಂಗಳೂರು: ಇತ್ತಿಚೆಗೆ ಜೈಲಿನಿಂದ ಬಂದು ರೌಡಿಶೀಟರ್ ನ ಭೀಕರವಾಗಿ ಕೊಲೆಯಾಗಿದ್ದಾನೆ. ಮಚ್ಚು-ಲಾಂಗ್‌ನಿಂದ ಕೊಚ್ಚಿ ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ಕೊಲೆಮಾಡಿದ್ದಾರೆ. ರಾಹುಲ್@ಪಲ್ಲು ಕೊಲೆಯಾದ ರೌಡಿ ಶೀಟರ್ ಆಗಿದ್ದು ಆಟೋದಲ್ಲಿ ಬಂದಿದ್ದ ದುಷ್ಕರ್ಮಿಗಳು ಕೊಲೆಮಾಡಿದ್ದಾರೆ.
ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದಿದ್ದ ರಾಹುಲ್ ಈ ಹಿಂದೆ ರೌಡಿಶೀಟರ್ ಪಾಲ್ ರವಿಯ ಹತ್ಯೆ ಕೇಸಲ್ಲಿ ಫಿಟ್ಟಾಗಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ರಾಹುಲ್ ಡಂಜೋ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ. ರಾತ್ರಿ ಕೃಷ್ಣಯ್ಯನಪಾಳ್ಯದ ಆಟೊ ಸ್ಟಾಂಡ್ ನಲ್ಲಿ ಸತ್ಯವೇಲು ಹಾಗೂ ಮುರುಗನ್ ಎಂಬ ಆಟೋ ಚಾಲಕರ ನಡುವೆ ಗಲಾಟೆ ಅತಿರೇಕಕ್ಕೆ ಹೋಗಿತ್ತುಮುರುಗನ್ ರಾಹುಲ್ ನ ಸ್ನೇಹಿತನಾಗಿದ್ದ. ಅದಕ್ಕಾಗಿ ರಾಹುಲ್ ಮುರುಗನ್ ಪರವಾಗಿ ಗಲಾಟೆಗೆ ಇಳಿದಿದ್ದ,ತಾನು ರೌಡಿಶೀಟರ್ ಮುಗಿಸೇಬಿಡ್ತೀನಿ ಅಂತ ಸತ್ಯವೇಲು ಹಾಗೂ ಅರುಣ್ ಎಂಬವರಿಗೆ ಆವಾಜ್ ಹಾಕಿದ್ದ ಇದರಿಂದ ಸಿಟ್ಟಿಗೆದ್ದ ಆಟೋಚಾಲಕರಾದ ಅರುಣ್ ಹಾಗೂ ಸತ್ಯವೇಲು ರಾಹುಲ್ ಗೆ ಸ್ಕೆಚ್ ಹಾಕಿನಿನ್ನೆ ತಡರಾತ್ರಿ ಆಟೋದಲ್ಲಿ ಬಂದು ರಾಹುಲ್ ನನ್ನ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ಸದ್ಯ ಪ್ರಕರಣ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆಬೀಸಿದ್ದಾರೆ.
PublicNext
09/10/2022 01:15 pm