ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಸರ್ಗ ಲೇಔಟ್ ಪ್ರತಿಷ್ಟಿತ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಸುಮಾರು 300ಕ್ಕೂ ಹೆಚ್ಚು ಸಿಎ ಸೈಟ್ ಜಾಗ ಮತ್ತು ಪಾರ್ಕ್ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆಂದು ಗಂಭೀರ ಆರೋಪ ಕೇಳಿ ಬಂದಿದೆ.
ಇನ್ನು, ಇಂಥದೊಂದು ಗಂಭೀರ ಆರೋಪವನ್ನು ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ್, ನಿರ್ಮಾಣ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಡಿ ಲಕ್ಷ್ಮೀನಾರಾಯಣ ವಿರುದ್ಧ ಆರೋಪ ಮಾಡಿದ್ದಾರೆ.
ಇನ್ನು, ಸರ್ಕಾರದ ನಿಯಮದ ಪ್ರಕಾರ ಬಿಎಂಆರ್ ಡಿ ಸೈಟ್ ಮಾಡಲು , ಯೋಜನಾ ಪ್ರಾಧಿಕಾರದ ವತಿಯಿಂದ ಅನುಮತಿ ಪಡೆದಿರಬೇಕು. ಉದಾಹರಣೆಗೆ ಒಂದು ಎಕರೆ ಜಾಗದಲ್ಲಿ 60% ಮಾಲೀಕರಿಗೆ ಉಳಿಕೆ ಜಾಗ ಅಭಿವೃದ್ಧಿಗಾಗಿ 40% ಜಾಗವನ್ನ
ರಸ್ತೆ, ಸಮುದಾಯ ಭವನ ಪಾರ್ಕಿಂಗ್ ಜಾಗ, ನಾಗರಿಕರಿಗೆ ಕಾಯ್ದಿರಿಸಿದ ಜಾಗ ಪ್ಲೇ ಗ್ರೌಂಡ್, ಸಾರ್ವಜನಿಕ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಆದರೆ, ಡಿಸಿ ಕನ್ವೆನ್ಷನ್ ಮಾಡಿ ಬಿಎಂಆರ್ಡ್ ಸೈಟ್ ಅಂತ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ.
ಇನ್ನು, ಕಲ್ಲುಬಾಳು ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ್ ಮಾತನಾಡಿ, ನಿರ್ಮಾಣ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ 1998ರಲ್ಲಿ 120 ಎಕರೆ ಜಾಗವನ್ನು ಖರೀದಿ ಮಾಡಿ ನಿಸರ್ಗ ಬಡಾವಣೆ ಮಾಡಿದ್ರು. ಆ ಜಾಗದಲ್ಲಿ ನಾಗರಿಕರಿಗೆ ಕಾಯ್ದಿರಿಸಿದ್ದ ಜಾಗ ಮತ್ತು ಪಾರ್ಕಿಂಗ್ ಸೈಟ್ 300ಕ್ಕೂ ಹೆಚ್ಚು ಸೈಟ್ ಗಳನ್ನು ಬಿಡಲಾಗಿತ್ತು. ಅದೀಗ ಆ ಸಿಎ ಸೈಟ್ ಜಾಗ ಮತ್ತು ಪಾರ್ಕಿಂಗ್ ಜಾಗವನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಒಟ್ಟಾರೆ ನಿಸರ್ಗ ಬಡಾವಣೆಯ ಎಂಡಿ ಲಕ್ಷ್ಮಿ ನಾರಾಯಣ್, ಪಿಡಿಒ, ಸಬ್ ರಿಜಿಸ್ಟರ್ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಹಣದಾಸೆಗೆ ಡಿಸಿ ಕನ್ವೆನ್ಷನ್ ಭೂಮಿಯನ್ನು ಬಿಎಂಆರ್‌ಡಿ ಸೈಟ್ ಎಂದು ನಂಬಿಸಿ ಸಿಎ ಸೈಟ್ ಗಳನ್ನು ಮಾರಾಟ ಮಾಡುತ್ತಿರುವುದು ಮಾತ್ರ ವಿಪರ್ಯಾಸ. ಈಗಲೇ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೆ ಇದ್ದ ಸಂದರ್ಭದಲ್ಲಿ ಜಮೀನು ಖರೀದಿ ಮಾಡಿರುವ ಮಾಲೀಕರು ಬೀದಿಗೆ ಬೀಳೋದು ಗ್ಯಾರಂಟಿ. ಏನಾದ್ರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲಿ ಅನ್ನೋದೇ ನಮ್ಮ ಆಶಯ.
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
09/10/2022 10:33 am