ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಶೆ ಬರೋ ಸಿರಪ್ ಮಾರುತ್ತಿದ್ದ ಆರೋಪಿ ಅಂದರ್

ಬೆಂಗಳೂರು: ನಶೆ ಬರುವ ಮಾದಕ ವಸ್ತುವಿರುವ ಸಿರಪ್ ಮಾರಾಟದ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜೆಪಿ ನಗರ ಪೊಲೀಸರು ಅಮಾನ್ ಉಲ್ಲ ಎಂಬುವನನ್ನ ಬಂಧಿಸಿದ್ದಾರೆ.

ವಿಜಯನಗರದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಅಮಡ್ತಿದ್ದ ಅಮಾನ್ ಉಲ್ಲಾ. ಮೆಡಿಕಲ್ ಮಾಲೀಕ ಇಮ್ರಾನ್‌ನಿಂದ ನಿಷೇಧಿತ ಎಸ್ಕೂಪ್ ಹೆಸರಿನ ಸಿರಪ್ ಖರೀದಿ ಮಾಡಿ ಜೆಪಿ ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಪೊಲೀಸ್ರರು ಮಾಹಿತಿ ಪಡೆದು ಆರೋಪಿಯನ್ನ ಬಂಧಿಸಿ 356 ಬಾಟಲ್ ಎಸ್ಕೂಪ್ ಸಿರಪ್ ಸೀಜ್ ಮಾಡಿದ್ದಾರೆ.

ಎಸ್ಕೂಪ್ ಸಿರಪ್ ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಮಾದಕ‌ ಅಂಶ ಇರೋದ್ರಿಂದ ಈ ಸಿರಪ್‌ನ ರಾಜ್ಯದಲ್ಲಿ ನಿಷೇಧಿಸಲಾಗಿತ್ತು. ಕಡಿಮೆ ಬೆಲೆಗೆ ಸಿಗುವ ಈ ಸಿರಪ್‌ನ ಮಾದಕ ವ್ಯಸನಿಗಳು ಬಳಸಿ ನಶೆ ಏರಿಸಿಕೊಳ್ಳುತ್ತಿದ್ರು. ಸದ್ಯ ಈ ಸಿರೆ ಹಿಂದೆ ಬಿದ್ದಿರೋ ಜೆಪಿ ನಗರ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Edited By : Vijay Kumar
PublicNext

PublicNext

08/10/2022 03:37 pm

Cinque Terre

15.94 K

Cinque Terre

1

ಸಂಬಂಧಿತ ಸುದ್ದಿ