ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಜ್ಜಿ ‌ಕೊಂದು ಶವ ಕಬೋರ್ಡ್ ನಲ್ಲಿಟ್ಟ ಅಮ್ಮ- ಮಗ!; 5 ವರ್ಷಗಳ ಬಳಿಕ‌ ಬಂಧನ

ಬೆಂಗಳೂರು: ಅಬ್ಬಬ್ಬಾ ಈ ಸ್ಟೋರಿ ಹೇಳ್ತಿದ್ರೆ ಮೈ ಜುಮ್ ಅನ್ಸುತ್ತೆ! ಯಾಕಂದ್ರೆ ಈ ಸ್ಟೋರಿ ಹಿಂದಿದೆ ಅಮ್ಮ- ಮಗನ ಭಯಾನಕ‌ ಕ್ರೈಂ ಹಿಸ್ಟರಿ. ಅಜ್ಜಿಯನ್ನು ಕೊಂದು ಮನೆಯ ಕಬೋರ್ಡ್ ನಲ್ಲಿಟ್ಟು ಪ್ಲಾಸ್ಟಿಂಗ್ ಮಾಡಿ ಆ ಶವದ ಜೊತೆಗೆ ಆರು ತಿಂಗಳು ವಾಸವಿದ್ದ ಅಮ್ಮ- ಮಗನ ಕತೆ ಇದು!

ಎಸ್... 5 ವರ್ಷಗಳ ಹಿಂದೆ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸಿದ್ದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣ ಕೊನೆಗೂ ಪತ್ತೆಯಾಗಿದೆ. ತಾರ್ಕಿಕ ಅಂತ್ಯ ಕೊಡದೆ ಧೂಳು ಹಿಡಿದಿದ್ದ ಪ್ರಕರಣವನ್ನು ಮತ್ತೆ ಸವಾಲಾಗಿ ಸ್ವೀಕರಿಸಿದ ಕೆಂಗೇರಿ‌ ಠಾಣೆಯ ಇನ್‌ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ, ಅಜ್ಜಿ ಕೊಲೆಗೈದ ಆರೋಪದಡಿ ಮೊಮ್ಮಗ ಸಂಜಯ್ ಹಾಗೂ ಮಗಳು ಶಶಿಕಲಾಳನ್ನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ.

ಕೆಂಗೇರಿ ಸ್ಯಾಟಲೈಟ್ ಬಡಾವಣೆಯಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ‌ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸವಿದ್ರು. ಶಿಸ್ತು- ಮಡಿವಂತಿಕೆಯನ್ನು ಶಾಂತಕುಮಾರಿ ಮೊಮ್ಮಗ ಸಂಜಯ್ ಗೋಬಿ ತಿನ್ನುವ ವಿಚಾರಕ್ಕೆ ಬೈದು ಗೋಬಿ ತೆಗೆದು ಸಂಜಯ್ ಮುಖದ ಮೇಲೆ ಎಸೆದಿದ್ರು. ಇದ್ರಿಂದ ಕುಪಿತಗೊಂಡ ಸಂಜಯ್ ಅಜ್ಜಿಗೆ ಲಟ್ಟಣಿಗೆಯಿಂದ ಹಲ್ಲೆ ನಡೆಸಿದ್ದ. ತೀವ್ರ ರಕ್ತಸ್ರಾವದಿಂದ ಶಾಂತ‌ಕುಮಾರಿ ಸಾವನ್ನಪ್ಪಿದ್ರು.

ಈ ವಿಚಾರವನ್ನು ಶಶಿಕಲಾ ಪೊಲೀಸ್ರಿಗೆ ತಿಳಿಸುವ ಮನಸ್ಸು ಮಾಡಿದ್ರು. ಆದ್ರೆ, ಸಂಜಯ್ ಮಗನನ್ನೇ ಜೈಲಿಗೆ ಕಳುಹಿಸ್ತಿಯಾ ಅಂತ ತಾಯಿಯನ್ನು ಪುಸಲಾಯಿಸಿದ್ದ. ನಂತರ ಸಂಜಯ್ ಸ್ನೇಹಿತ ನಂದೀಶ್ ಜೊತೆ ಸೇರಿ ಅಜ್ಜಿ ಹೆಣಕ್ಕೆ ಕೆಮಿಕಲ್ ಹಾಕಿ ಕಬೋರ್ಡ್ ಸೇರಿಸಿ ಸಿಮೆಂಟ್ ನಿಂದ ಪ್ಲಾಸ್ಟಿಂಗ್ ಮಾಡಿದ್ರು! ಆಗಾಗ ವಾಸನೆ ಬರ್ತಿದ್ರಿಂದ ಬಣ್ಣ ಬಳಿದು ಮ್ಯಾನೇಜ್ ಮಾಡ್ತಿದ್ರು. ವಾಸನೆ ಹೆಚ್ಚಾದಾಗ ಊರಿಗೆ ಹೋಗಿ ಬರ್ತಿವಿ ಅಂತ ಮನೆ ಖಾಲಿ ಮಾಡಿದ್ರು.

ಎಂಟು ತಿಂಗಳಾದ್ರೂ ಅಮ್ಮ- ಮಗ ಪತ್ತೆಯಾಗದಿದ್ದಾಗ ಮನೆ ಮಾಲೀಕ ಕೀ ಓಪನ್ ಮಾಡಿ ಮನೆ ಕ್ಲೀನ್ ಗೆ ಮುಂದಾದಾಗ ಮನೆಯಲ್ಲಿದ್ದ ಹೆಣದ ವಾಸನೆಯಿಂದ ಕೊಲೆ ರಹಸ್ಯ ಬೆಳಕಿಗೆ ಬಂದಿತ್ತು.

ಏರೋನಾಟಿಕಲ್ ಎಂಜಿನಿಯರ್ ಕನಸು ಕಂಡಿದ್ದ ಸಂಜಯ್ ಕೊಲ್ಲಾಪುರದ ಹೋಟೆಲ್ ಒಂದರಲ್ಲಿ ಕೆಲಸ ಮಾಡ್ತಿದ್ದ. ಸ್ನೇಹಿತನಿಗೆ ಸಹಾಯ ಮಾಡಿದ್ದಕ್ಕೆ ನಂದೀಶ 2017ರಲ್ಲೆ ಪೊಲೀಸ್ರ ಅತಿಥಿಯಾಗಿದ್ದ. ಇತ್ತ ಮಾಡಿದ ಪಾಪ ಬೆನ್ನು ಬಿಡದೆ ಐದು ವರ್ಷದ ನಂತರ ತಾಯಿ- ಮಗ ಜೈಲು ಸೇರಿದ್ದಾರೆ.

-ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

07/10/2022 05:12 pm

Cinque Terre

32.86 K

Cinque Terre

0

ಸಂಬಂಧಿತ ಸುದ್ದಿ