ಬೆಂಗಳೂರು: ವೈದ್ಯೋ ನಾರಾಯಣ ಹರಿ ಅಂತಾ ವೈದ್ಯರನ್ನ ಜನರು ದೇವರಿಗೆ ಹೋಲಿಸ್ತಾರೆ. ವೈದ್ಯರ ಬಳಿ ಹೋದಾಗ ಹೆಣ್ಣು ಕೂಡ ಆತನ ದೇವರ ರೀತಿ ಕಂಡು ತನ್ನ ದೇಹ ಮುಟ್ಟಲು ಅನುಮತಿ ನೀಡ್ತಾಳೆ. ಆದ್ರೆ ಇಲ್ಲೊಬ್ಬ ವೈದ್ಯನನ್ನ ಈ ನಂಬಿಕೆಯನ್ನೆ ಮಿಸ್ ಯೂಸ್ ಮಾಡಿಕೊಂಡು ಯುವತಿಗೆ ಲೈಂಗಿಕ ಕಿರುಕುಳ ನೀಡಿ ವೈದ್ಯ ವೃತ್ತಿಗೆ ಅವಮಾನ ಮಾಡಿದ್ದಾನೆ.
ನಗರದ ಚಂದ್ರಾ ಲೇಔಟ್ ಡಾಕ್ಟರ್ ಉಬೇದುಲ್ಲಾ ಕಾಮುಕತನದಿಂದ ಬೇಸತ್ತ ಯುವತಿ ಚಂದ್ರಾ ಲೇಔಟ ಠಾಣೆಗೆ ದೂರು ನೀಡಿದ್ದಾಳೆ.
ಚಿಕಿತ್ಸೆಗೆಂದು ಬರುವ ಹೆಣ್ಣು ಮಕ್ಕಳೇ ಈತ ಟಾರ್ಗೆಟ್ ಮಾಡಿಕೊಂಡು ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ತೃಷೆ ತೀರಿಸಿಕೊಳ್ತಿದ್ದ ಡಾಕ್ಟರ್ ವಿರುದ್ಧ ಸದ್ಯ ಎಫ್ ಐ ಆರ್ ದಾಖಲಾಗಿದೆ.ಹೊಟ್ಟೆ ನೋವು ಎಂದು ಹೋಗಿದ್ದ 19 ರ ಯುವತಿ ತನ್ನ ಅಜ್ಜಿಯ ಜೊತ ಕ್ಲಿನಿಕ್ ಗೆ ಹೋಗಿದ್ರೆ ಈ ಡಾಕ್ಟರ್ ಉಬೇದುಲ್ಲಾ ಅಜ್ಜಿಯನ್ನ ಹೊರ ಕೂರಿಸಿ ಯುವತಿಗೆ ಗ್ಲೂಕೋಸ್ ಹಾಕಿನಂತರ ಆಕೆಯ ಮೇಲೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಇನ್ನೂ ಡಾಕ್ಟರ್ ಮೇಲೆ ಎಫ್ ಐ ಆರ್ ದಾಖಲಾಗ್ತಿದ್ದಂತೆ ಡಾ. ಉಬೇದುಲ್ಲ ಪರಾರಿಯಾಗಿದ್ದು ಚಂದ್ರಾಲೇಔಟ್ ಪೊಲೀಸ್ರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
PublicNext
07/10/2022 03:27 pm