ದೇವನಹಳ್ಳಿ: ಕಳೆದ ಸೆಪ್ಟೆಂಬರ್ 10ರಂದು ಮೂರು ಜನ ಕಿಡಿಗೇಡಿಗಳು ಕದ್ದ ಕೆಟಿಎಂ ಬೈಕ್ನಲ್ಲಿ ಬಂದು ಸರ ಕದ್ದೊಯ್ದಿದ್ದರು. ದೇವನಹಳ್ಳಿ ಬೈಪಾಸ್ ರಸ್ತೆ ಕನ್ನಮಂಗಲ ಗೇಟ್ ನಡೆದುಕೊಂಡು ಹೋಗ್ತಿದ್ದ, ಮಹಿಳೆ ಕತ್ತಿನ ಸರ ಕಸಿದು ಎಸ್ಕೇಪ್ ಆಗಿದ್ದರು. ಸರ ಕಳೆದುಕೊಂಡ ಮಹಿಳೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ದೇವನಹಳ್ಳಿ ಇನ್ಸ್ಪೆಕ್ಟರ್ ಮತ್ತವರ ತಂಡ ಅಮೃತಹಳ್ಳಿಯ ಮೊಹ್ಮದ್ ಸಲ್ಮಾನ್(23) ಮತ್ತು ಯಲಹಂಕದ ಜಿಶಾನ್ ಖಾನ್(25) ನನ್ನು ಬಂಧಿಸಿದ್ದಾರೆ.
ಯಲಹಂಕ ಮತ್ತು ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖದೀಮರು ಕೆಟಿಎಂ ಬೈಕ್ ಕದ್ದಿದ್ದರು. ಈ ಕದ್ದ ಬೈಕ್ನಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕಳ್ಳರಲ್ಲಿ ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕನೂ ಇದ್ದಾನೆ. ಈ ಮೂರು ಜನರ ಬಂಧನದಿಂದ ಮೂರು ಪ್ರಕರಣ ಪತ್ತೆಯಾಗಿವೆ.
ಬಾಲಕ ಸೇರಿ ಇನ್ನಿಬ್ಬರು ಸರ ಮತ್ತು ಬೈಕ್ ಕಳ್ಳರ ಬಂಧನದಿಂದ ಈಶಾನ್ಯ ಭಾಗದಲ್ಲಿ ಕಳ್ಳರ ಉಪಟಳಕ್ಕೆ ಬ್ರೇಕ್ ಹಾಕಲು ಪೊಲೀಸರು ಯತ್ನಿಸಿದ್ದಾರೆ. ಇದು ಕಳ್ಳರಿಗೆ ಪೊಲೀಸರು ಎಚ್ಚರಿಕೆಯೂ ಆಗಿದೆ..
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
Kshetra Samachara
07/10/2022 11:04 am