ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಹೊಯ್ಸಳ" ಹತ್ತಿ ಹೋದವ ಶವವಾಗಿ ಪತ್ತೆ!; ಲಾಕಪ್ ಡೆತ್ ಶಂಕೆ

ಬೆಂಗಳೂರು: ರಾಮಮೂರ್ತಿನಗರ ಪೊಲೀಸರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ! ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದೆ ಅನ್ನೋ ಆರೋಪ‌ ಕೇಳಿ ಬಂದಿದ್ದು, ವಿಚಾರಣೆಗಾಗಿ ಕರೆತಂದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸೆ.23ರಂದು ಮಕ್ಕಳ ಕಳ್ಳ ಎಂದು ವ್ಯಕ್ತಿಯನ್ನು ಸಾರ್ವಜನಿಕರು ಥಳಿಸಿ ರಾಮಮೂರ್ತಿನಗರ ಪೊಲೀಸ್ರಿಗೆ ಒಪ್ಪಿಸಿದ್ರು.

ಪೊಲೀಸ್ರು ಆ ವ್ಯಕ್ತಿಯನ್ನು ಹೊಯ್ಸಳ ವಾಹನದಲ್ಲಿ ಕರೆದೋಗಿರೋ ವೀಡಿಯೊ ಕೂಡ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಇದಾದ ಮಾರನೇ ದಿನ ಅಂದ್ರೆ ಸೆ.24ರಂದು ಆ ವ್ಯಕ್ತಿ ಕೆಆರ್ ಪುರದ ಐಟಿಐ ಕಾಲೋನಿ ಬಳಿ ಶವವಾಗಿ ಪತ್ತೆಯಾಗಿದ್ದ. ಈ ಕೇಸ್ ಕೆ ಆರ್ ಪುರ ಪೊಲೀಸ್ರು ಅಸಹಜ ಸಾವು ಪ್ರಕರಣ ದಾಖಲಿಸಿ ಗುರುತು ಪತ್ತೆಯಾಗಿಲ್ಲ ಅಂತ ಕೇಸ್ ನಿಂದ ಕೈ ತೊಳೆದುಕೊಂಡಿದ್ರು‌. ಹೀಗಾಗಿ ರಾಮಮೂರ್ತಿನಗರ ಪೊಲೀಸರ ಮೇಲೆ ಲಾಕಪ್ ಡೆತ್ ಆರೋಪ ಕೇಳಿ ಬಂದಿದೆ.

ಕಸ್ಟಡಿಯಲ್ಲಿದ್ದ ಆ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸದೇ ಅಥವಾ ಹಲ್ಲೆಯಿಂದ ಜಾರ್ಖಂಡ್ ಮೂಲದ ಈ ವ್ಯಕ್ತಿ ಸತ್ತಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರ ಈ ನಡೆ ವಿರುದ್ಧ ಸಿಎಂ ಸೇರಿದಂತೆ ಹಲವು ಕಡೆ ಸಾರ್ವಜನಿಕರು ದೂರು ನೀಡಿ, ಸೂಕ್ತ ‌ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

07/10/2022 07:57 am

Cinque Terre

42.15 K

Cinque Terre

0

ಸಂಬಂಧಿತ ಸುದ್ದಿ