ಬೆಂಗಳೂರು: ಬಲವಂತದ ಮತಾಂತರ ಮಾಡಲು ಸಾಮಾಜಿಕ ಜಾಲತಾಣ ಬಳಸುತಿದ್ದಾರಾ ಮತಾಂಧರು? ಎಂಬ ಗುಮಾನಿ ಎದ್ದಿದೆ. ಹುಬ್ಬಳ್ಳಿಯ ಬಲವಂತದ ಕತ್ನಾ ಪ್ರಕರಣದಲ್ಲಿ ಹನಿಟ್ರಾಪ್ ಜಾಲವು ಪ್ಲ್ಯಾನ್ ಹೆಣೆದಿರುವ ಶಂಕೆ ವ್ಯಕ್ತವಾಗಿದೆ.
ಯುವತಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕೌಂಟ್ ಕ್ರಿಯೆಟ್ ಮಾಡಿ ಸಂತ್ರಸ್ತ ಶ್ರೀಧರ್ ಜೊತೆ ಯುವತಿ ಚಾಟ್ ಮಾಡಿರೋ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಒಂದುವರೆ ವರ್ಷದಿಂದ ಮೆಸೇಜ್ ಮಾಡಿ ಶ್ರೀಧರ್‌ನ ಯುವತಿ ಮುಖೇನ ಟ್ರಾಪ್ ಮಾಡಿಸಿರೋ ಶಂಕೆ ವ್ಯಕ್ತವಾಗಿದೆ. ಹಂತ ಹಂತವಾಗಿ ಶ್ರೀಧರ್‌ನ ತನ್ನತ್ತ ಸೆಳೆದಿದ್ದ ಯುವತಿ ನಂತರ ಒಂದು ದಿನ ಪ್ಲಾನ್ ಮಾಡಿ ನಿನ್ನನ್ನ ನೋಡ್ಬೇಕು ಎಂದು ಹುಬ್ಬಳ್ಳಿಗೆ ಕರೆಸಿಕೊಂಡಿದ್ದಳು.
ಕಳೆದ ಒಂದು ವಾರದ ಹಿಂದೆ ಶ್ರೀಧರ್ ಆಲಿಯಾಸ್ ಸಲ್ಮಾನ್ ಯುವತಿಯನ್ನು ಭೇಟಿ ಮಾಡಲು ಶ್ರೀಧರ್ ಹೋದಾಗ ಶ್ರೀಧರ್ ಮೇಲೆ 4 ರಿಂದ5 ಜನರು ಹಲ್ಲೆ ನಡೆಸಿದ್ರು. ಈ ವಿಚಾರವಾಗಿ ಹಲ್ಲೆಗೊಳಗಾಗಿದ್ದ ಶ್ರೀಧರ್ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದ. ಸದ್ಯ ಬನಶಂಕರಿ ಪೊಲೀಸರು ಸಾಮಾಜಿಕ ಜಾಲತಾಣದ ಆ ಫೇಕ್ ಅಕೌಂಟ್ ಜಾಲಾಡಿ ತನಿಖೆ ಮುಂದುವರೆಸಿದ್ದಾರೆ.
PublicNext
06/10/2022 07:08 pm