ಬೆಂಗಳೂರು: ಪಿಎಫ್ಐ ಹಾಗೂ ಅಂಗ ಸಂಸ್ಥೆಗಳ ಬ್ಯಾನ್ ಹಿನ್ನೆಲೆಯಲ್ಲಿ ಪೊಲೀಸರು ಇತ್ತೀಚೆಗಷ್ಟೇ ಪಿಎಫ್‌ಐ, ಸಿಎಫ್‌ಐ ಸೇರಿ ಅಂಗ ಸಂಸ್ಥೆಗಳ ಮೇಲೆ ದಾಳಿ ಮಾಡಿ ಕಚೇರಿಗಳಿಗೆ ಬೀಗ ಹಾಕಿದ್ದರು. ದಾಳಿ ವೇಳೆ ಕೆಲ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಪರಿಶೀಲಿಸಿದಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸ್ಫೋಟಕ ಸಂಗತಿ ಬಯಲಾಗಿದೆ.
ಯುವ ಸಮುದಾಯ ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಿಎಫ್ಐ ಮುಖಂಡರು ಮನಪರಿವರ್ತಿಸುತ್ತಿದ್ದರು ಎಂಬುದಕ್ಕೆ ಒಂದು ಚಿತ್ರ ಹಾಗೂ ಅದರಲ್ಲಿ ಬರೆದಿರುವ ಅಂಶಗಳೇ ಸಾಕ್ಷಿಯಾಗಿವೆ.
'ಜಿನೋಸೈಡ್' ಎಂಬ ಹೆಸರಿನಲ್ಲಿ ಬರಹದಲ್ಲಿ ಭಾರತದಲ್ಲಿ ಮುಸಲ್ಮಾನರ ಮೇಲೆ ನರಮೇಧ ನಡೆಯುತ್ತಿದೆ ಎಂದು ಬರೆಯಲಾಗಿದೆ. ಬಲಪಂಥೀಯ ಹಿಂದುತ್ವವು ಕೇಂದ್ರದಲ್ಲಿ ಅಧಿಕಾರವನ್ನು ಹಿಡಿದ ನಂತರ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ವಿರುದ್ಧದ ಹಿಂಸಾಚಾರವು ಉಲ್ಬಣಗೊಂಡಿದೆ. ಸಮುದಾಯಗಳ ನಡುವೆ ದ್ವೇಷವನ್ನು ಹರಡಲು ಅವರು ಸಮಾಜದಲ್ಲಿ ಅರ್ಥಹೀನ ಸುಳ್ಳುಗಳನ್ನು ಹರಡುತ್ತಾರೆ. ಈ ಸುಳ್ಳುಗಳನ್ನೇ ನಂಬಿ ಜನ ನಿಜ ಎಂದ ಭಾವಿಸಿದ್ದಾರೆ.
ಕೋಮುಗಲಭೆ, ಹತ್ಯೆ ನಡೆದಾಗ ನಮ್ಮ ಸಮುದಾಯ ಮೇಲೆ ಗುರಿಯಾಗಿಸಿಕೊಂಡು ಫೈರಿಂಗ್ ನಡೆಯುತ್ತದೆ. ವಿದ್ಯಾವಂತ ಹಾಗೂ ಅಮಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ನಿಜವಾದ ಅರ್ಥದಲ್ಲಿ, ಇದು ವ್ಯವಸ್ಥಿತ ಮತ್ತು ಸಂಘಟಿತ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದನ್ನು ನರಮೇಧ ಎಂದು ಕರೆಯಲಾಗುತ್ತದೆ. ಒಂದು ಗುಂಪಿನಿಂದ ಮತ್ತೊಂದು ಗುಂಪಿನಿಂದ ಯೋಜಿತ ಸಾಮೂಹಿಕ ಹತ್ಯೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೂರ್ವ ವಿಭಾಗದ ಪೊಲೀಸರಿಂದ ಬಂಧಿತರಾಗಿದ್ದ 15 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರ ಪರ ವಕೀಲರು ವಾದ ಮಂಡಿಸಿ ಬಂಧಿತರಾದ ಎಲ್ಲಾ ಆರೋಪಿಗಳು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಗೆ ಸಂಚು ರೂಪಿಸಿದ್ದರು. ಆರೋಪಿಗಳ ಗುರುತರವಾದ ಅಪರಾಧದ ಆರೋಪಗಳಿದ್ದು ಎಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಬೇಕೆಂದ ಮನವಿ ಕೋರ್ಟ್ ಪುರಸ್ಕರಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
PublicNext
03/10/2022 08:49 pm