ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುದದ್ವಾರಲ್ಲಿ ಚಿನ್ನ ಇಟ್ಟುಕೊಂಡು ಸಾಗಿಸುತ್ತಿದ್ದ ಸ್ಮಗ್ಲರ್ ಬಂಧನ

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುದದ್ವಾರದಲ್ಲಿ ಚಿನ್ನವನ್ನ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಖತರ್ನಾಕ್ ಕಳ್ಳನನ್ನ ಬಂಧಿಸಿದ್ದಾರೆ.

ಬಂಧಿತನಿಂದ 36 ಲಕ್ಷ 97 ಸಾವಿರ ರೂ. ಮೌಲ್ಯದ 729 ಗ್ರಾಂ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಯು ವಿದೇಶದಿಂದ ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಸ್ಮಗ್ಲಿಂಗ್ ಮಾಡ್ತಿದ್ದ. ಕೆಐಎಗೆ ಬಂದ ವೇಳೆ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.

ದುಬೈನಿಂದ ಬೆಂಗಳೂರಿಗೆ EK 568 ವಿಮಾನದಲ್ಲಿ ಪ್ರಯಾಣಿಕ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಕಪ್ಪು ಬಣ್ಣದ ಪ್ಯಾಕೇಟ್‌ಗಳ ರೀತಿ ನಾಲ್ಕು ತುಂಡುಗಳಾಗಿ ಇಟ್ಟುಕೊಂಡು ಖದೀಮ ಚಿನ್ನ ಸಾಗಿಸುತ್ತಿದ್ದ. ಅಧಿಕಾರಿಗಳ ಕಣ್ಣು ತಪ್ಪಿಸಿ ಸ್ಮಗ್ಲಿಂಗ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ಖದೀಮ ಜೈಲುಪಾಲಾಗಿದ್ದಾನೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : Vijay Kumar
Kshetra Samachara

Kshetra Samachara

01/10/2022 06:24 pm

Cinque Terre

5.81 K

Cinque Terre

0

ಸಂಬಂಧಿತ ಸುದ್ದಿ