ಬೆಂಗಳೂರು : ದಿನಕ್ಕೊಂದು ಬೈಕ್ ಓಡಿಸ್ಬೇಕು ಎನ್ನುವ ಶೋಕಿಗಾಗಿ ಕಂಡ ಕಂಡ ಬೈಕ್ ಕದಿಯುತ್ತಿದ್ದ ಇಬ್ಬರು ಖದೀಮರನ್ನ ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.
ಸುಹೈಲ್ ಮತ್ತು ನಯಾಜ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರು ಗಾಂಜಾ ನಶೆಯಲ್ಲಿ ಸಿಕ್ಕ ಸಿಕ್ಕ ಏರಿಯಾದಲ್ಲಿ ಸುತ್ತಾಡಿ ಯಾವ ದ್ವಿಚಕ್ರ ವಾಹನ ಇಷ್ಟ ಆಗತ್ತೋ ಅದನ್ನ ಕ್ಷಣಮಾತ್ರದಲ್ಲಿ ಲಾಕ್ ಮುರಿದು ಪರಾರಿಯಾಗುತ್ತಿದ್ದರು.
ಪೆಟ್ರೋಲ್ ಖಾಲಿಯಾಗುವವರೆಗೂ ಸಿಕ್ಕಸಿಕ್ಕಲ್ಲಿ ಸುತ್ತಾಡಿ ಬಳಿಕ ಎಲ್ಲೆಂದರಲ್ಲಿ ಬಿಟ್ಟು ಎಸ್ಕೇಪ್ ಆಗುತ್ತಿದ್ದರು. ಸದ್ಯ ಇಬ್ಬರೂ ಶೋಕಿವಾಲಾಗಳನ್ನ ಬಂಧಿಸಿರುವ ಸಂಜಯ್ ನಗರ ಪೊಲೀಸರು ಬಂಧಿತರಿಂದ ಆರು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
PublicNext
30/09/2022 03:24 pm