ಬೆಂಗಳೂರು: ಯುವಕರ ನಡುವೆ ಮಾರಾಮಾರಿ ನಡೆದು ಓರ್ವನ ಬಲಗೈ ತುಂಡಾಗಿರುವ ದುರ್ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.
ಶೇಬ್ ಹಲ್ಲೆಗೊಳಗಾದ ಯುವಕನಗಿದ್ದು, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬಾಪೂಜಿನಗರದ ಶೋಭಾ ಟೆಂಟ್ ಬಳಿ ಘಟನೆ ನಡೆದಿದೆ. ಮುಬಾರಕ್ ಮತ್ತು ಸಮೀರ್ ಸೇರಿ ಐವರು ಯುವಕರ ಗುಂಪು ಶೇಬ್ ಎಂಬಾತನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಹಲ್ಲೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಹಲ್ಲೆಗೊಳಗಾದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿರುವ ಬ್ಯಾಟರಾಯನಪುರ ಪೊಲೀಸರು ಗಾಯಾಳು ಹೇಳಿಕೆ ದಾಖಲಿಸಿ ಹಲ್ಲೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
Kshetra Samachara
28/09/2022 08:33 am