ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಳ್ಳತನಕ್ಕೆ ಹೊಂಚು; ಜನರ ಕೈ ಸೆರೆಯಾದ ಚೋರ ಪೊಲೀಸ್‌ ವಶ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬೆಟ್ಟಹಲಸೂರು ಗ್ರಾಮ ಪಂಚಾಯ್ತಿ ಬಳಿ ಕಳ್ಳನೊಬ್ಬ ತನ್ನ ಕೈಚಳಕ ತೋರಲು ಬಂದು ಜನರಿಗೆ‌ ಸಿಕ್ಕಿ ಬಿದ್ದಿದ್ದಾನೆ.

ಕಳೆದ ರಾತ್ರಿ 1 ಗಂಟೆ ವೇಳೆಗೆ ಬೆಟ್ಟಹಲಸೂರು ಗ್ರಾಮ ಪಂಚಾಯ್ತಿ ಕಟ್ಟಡ ಸಮೀಪದ ಮನೆಯ ಕಾಂಪೌಂಡ್ ಬಳಿ ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಮಧ್ಯರಾತ್ರಿ ವೇಳೆ ನಾಯಿಗಳು ಬೊಗಳಿದ್ದರಿಂದ ಎಚ್ಚೆತ್ತ ಜನ‌ರು ಬಂದು ವಿಚಾರಿಸಿದಾಗ ಈತ ಸಮರ್ಪಕ ಉತ್ತರ ನೀಡದೆ ಪರಾರಿಗೆ ಯತ್ನಿಸಿದ. ಈ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳ್ಳ ತಪ್ಪಿಸಿಕೊಂಡು ಹೋಗದಿರಲಿ ಎಂದು ಚೆಯರ್‌ ಗೆ ಕಟ್ಟಿ ಹಾಕಿ, ಚಿಕ್ಕಜಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

27/09/2022 08:27 am

Cinque Terre

21.55 K

Cinque Terre

2