ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಸಿಗರೇಟ್ ಕೊಡದ ಸಿಟ್ಟು" ಅಂಗಡಿ ಮಾಲೀಕನ ಮೂಗನ್ನೇ ತುಂಡರಿಸಿದ ಗೂಂಡಾ!; ಖಾಕಿ ಮೌನ

ಅಂಗಡಿಲಿ ಸಿಗರೇಟ್ ಕೊಟ್ಟಿಲ್ಲ ಎಂದು ಕಿಡಿಗೇಡಿಯೊಬ್ಬ ವ್ಯಕ್ತಿ ಮೇಲೆ ರೌಡಿ ರೀತಿ ಅಟ್ಯಾಕ್ ಮಾಡಿದ್ದಾನೆ! ಪ್ಲಾನ್ ಮಾಡಿ ಗೆಳೆಯನ ಜೊತೆ ಅಟ್ಯಾಕ್ ಮಾಡ್ತಾನೆ. ಎಲೆಕ್ಟ್ರಾನಿಕ್ ಸ್ಕೇಲ್ ಮೂಲಕ ಮೂಗು ಮುರಿದಾಕಿ, ಮುಖಕ್ಕೆ ಪಂಚ್ ಗಳ ಸುರಿಮಳೆ ಗೆಯ್ಯುವ CC TV ನೋಡಿದ್ರೆ ಭಯ ಆಗ್ತದೆ. ಆದರೆ, ಹೊಸಕೋಟೆಯ ಸೂಲಿಬೆಲೆ ಪೊಲೀಸರು FIR ಮಾಡಿದ್ರೂ ಆರೋಪಿನ ಬಂಧಿಸದೆ ಕೈಕಟ್ಟಿ ಕುಳಿತಿದ್ದಾರೆ!

ಹೀಗೆ ಪೋಸ್ ಕೊಡ್ತಿರೋ ಅಭಿಲಾಷನೇ ಸೂಲಿಬೆಲೆಯ ಪ್ರದೀಪ್ ಎಂಬ ಹಾಲಿನಂಗಡಿ ಮಾಲೀಕನ‌ ಮೇಲೆ ಪಂಚ್‌ ಗಳ ಸುರಿಮಳೆಗೈದ ಕಿಡಿಗೇಡಿ. ಸೆ.16ರಂದು ಹೊಸಕೋಟೆ ತಾಲೂಕು ಸೂಲಿಬೆಲೆ ಸರ್ಕಾರಿ ಆಸ್ಪತ್ರೆಯ ಅಂಗಡಿ ಬಳಿ ರಾತ್ರಿ ಸುಮಾರು 8 ಗಂಟೆಗೆ ಅಟ್ಯಾಕ್ ನಡೆದಿದೆ.

ಸೂಲಿಬೆಲೆ ಪಕ್ಕದ ವಳಗೆರೆಪುರದ ಅಭಿಲಾಷ್ ಮತ್ತೊಬ್ಬ ಮುರಳಿ ಗೂಂಡಾಗಿರಿ ಮಾಡಿ ಎಸ್ಕೇಪ್ ಆಗಿದ್ದಾರೆ. ಹೀಗೆ ಅಭಿಲಾಷ್ ಅನೇಕ ವರ್ಷಗಳಿಂದ ಗೂಂಡಾಗಿರಿ, ಹಲ್ಲೆ ಕೃತ್ಯ ನಡೆಸುತ್ತಿದ್ದ. ಅಭಿಲಾಷ್ ಬಗ್ಗೆ ಗೊತ್ತಿರುವ ಯಾರೂ ಆತನ ವಿರುದ್ಧ ದೂರು ನೀಡಲು ಭಯ ಪಡ್ತಿದ್ದರು.

ಇದೀಗ ಮೂಗು ಮುರಿದುಕೊಂಡ ಪ್ರದೀಪ್ ಸೂಲಿಬೆಲೆ ಪೊಲೀಸ್ ಠಾಣೆಲಿ FIR ದಾಖಲಿಸಿದ್ದಾನೆ. ಆದರೆ, PSI ನಾರಾಯಣಸ್ವಾಮಿ ಉದ್ದೇಶಪೂರ್ವಕವಾಗಿ ಹಲ್ಲೆಕೋರ ಅಭಿಲಾಷ್ ನನ್ನ ಬಂಧಿಸದೆ, ಆತ ಬೇಲ್ ತೆಗೆದುಕೊಳ್ಳಲು ನೆರವಾಗಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.

ಅಭಿಲಾಷ್ ಕಡೆಯವ್ರು ಕೇಸ್ ವಾಪಸ್ ತಗೋಳ್ಳಿ. ಇಲ್ಲವಾದ್ರೆ, ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಹಾಕ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ ಎಂದು ಪ್ರದೀಪ್ ಕುಟುಂಬ ಭಯಗೊಂಡಿದೆ. ನೊಂದ ಕುಟುಂಬಕ್ಕೆ ಸೂಲಿಬೆಲೆ ಪೊಲೀಸರಿಂದ ನ್ಯಾಯಸಿಗುತ್ತಾ!?

Edited By :
PublicNext

PublicNext

26/09/2022 06:18 pm

Cinque Terre

28.46 K

Cinque Terre

3