ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಡಿಗೆಗೆ ಕಾರು ಪಡೆದು ದರೋಡೆ ಮಾಡಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ದಂಪತಿ ಬಂಧನ

ಯಲಹಂಕ: ಬಾಡಿಗೆಗೆ ಕಾರು ಪಡೆದು ರಾತ್ರಿಯೆಲ್ಲಾ ಸುತ್ತಾಡಿ ಕೊನೆಗೆ ಕ್ಯಾಬ್ ಡ್ರೈವರ್‌ಗೆ ಚಾಕು ತೋರಿಸಿ ಕಾರು ಸಮೇತ ಎಸ್ಕೇಪ್ ಆಗಿದ್ದ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ದಂಪತಿಯನ್ನ ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ. ಹೀಗೆ ಮಳ್ಳನ ರೀತಿ ಪೋಸ್ ಕೊಟ್ಟಿರೊ ಆಸಾಮಿಯೆ ಮಂಜ ಅಲಿಯಾಸ್ ಮೇಕೆ ಮಂಜ. ಇನ್ನು ನಾನು ಸಾಚಾ ಅಂತ ದುಃಖದ ರೀತಿ ಕಾಣಿಸ್ತಿರೊ ಈಕೆ ಹೆಸರು ವೇದಾವತಿ ಅಂತ, ಮೇಕೆ ಮಂಜನ‌ ಹೆಂಡತಿ.

ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ನಾಗೇನಹಳ್ಳಿ ಬಳಿ ಸೆಪ್ಟೆಂಬರ್ 5ರಂದು ರಾತ್ರಿ ಕಾರನ್ನು ಬಾಡಿಗೆಗೆ ಬುಕ್ ಮಾಡಿದ್ದರು‌. ರಾತ್ರಿಯೆಲ್ಲಾ ಬಾಡಿಗೆ ಕಾರಿನಲ್ಲಿ ಸುತ್ತಾಟ ನಡೆಸಿದ್ದರು ಕಳ್ಳ ದಂಪತಿ. ಡ್ರೈವರ್ ಶಿವಶಂಕರ್ ಗೆ ನಿದ್ದೆ ಬಂದ ಹಿನ್ನೆಲೆ ಮೇಕೆ ಮಂಜನೇ ಕಾರ್ ಡ್ರೈವಿಂಗ್ ಮಾಡಿದ್ದಾನೆ. ಬೆಳಗಿನ ಜಾವ ಶಿವಶಂಕರ್ ಗೆ ಎಚ್ಚರ ಆದಾಗ ಮೇಕೆ ಮಂಜನಿಂದ ಚಾಕು ತೋರಿಸಿ, ಬೆದರಿಸಿ ಹಣ, ಎರಡು ಮೊಬೈಲ್ ಮತ್ತು ಕಾರನ್ನು ಕಸಿದು ಪರಾರಿಯಾಗಿದ್ದರು.

ಮೇಕೆ ಮಂಜನ ವಿರುದ್ದ ಯಲಹಂಕ ಉಪನಗರ ಠಾಣೆಲಿ ಒಂದು ಕೊಲೆ, 4ಕೊಲೆಯತ್ನ, ಅಪಹರಣ, ರಾಬರಿ, ಸುಲಿಗೆ ಪ್ರಕರಣ ದಾಖಲಾಗಿವೆ. ಈತನ ವಿರುದ್ಧ ರೌಡಿಶೀಟರ್ ಸಹ ತೆರೆಯಲಾಗಿದೆ. ಯಲಹಂಕ ಉಪನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ16ಪ್ರಕರಣ ದಾಖಲಾಗಿವೆ. ಸದ್ಯ

ಆರೋಪಿಗಳಿಂದ ಒಂದು ಟಯೋಟಾ ಇಟಿಯೋಸ್, ಎರಡು ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್.. ಯಲಹಂಕ..

Edited By : Vijay Kumar
Kshetra Samachara

Kshetra Samachara

26/09/2022 03:13 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ