ದೊಡ್ಡಬಳ್ಳಾಪುರ: ಪಿ.ಜಿ. ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪಶ್ಚಿಮ ಬಂಗಾಳದ ಕಟ್ಟಡ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಟ್ಟಡ ಮಾಲೀಕರ ನಿರ್ಲಕ್ಷ್ಯತೆಯಿಂದ ಕಾರ್ಮಿಕನ ಸಾವಾಗಿದೆ ಎಂದು ಕಟ್ಟಡ ಕೂಲಿ ಕಾರ್ಮಿಕ ಸಂಘ ಆರೋಪ ಮಾಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯ ಗೀತಾ ವಿಶ್ವವಿದ್ಯಾಲಯದ ಮುಂದೆ ಪಿಜಿ ಕಟ್ಟಡದ ಕೆಲಸ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಸೆಂಟ್ರಿಂಗ್ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ವಿದ್ಯುತ್ ಸ್ವರ್ಶಿಸಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನ ಬಿಪುಲ್ ರಾಯ್ (32) ಎಂದು ಗುರುತಿಸಲಾಗಿದೆ. ಮೃತರು ಪಶ್ಚಿಮ ಬಂಗಾಳದ ಕುಬಿಜಿಯಾರ್ ಜಿಲ್ಲೆಯ ನಿವಾಸಿಯಾಗಿದ್ದು, ಸೆಟ್ರಿಂಗ್ ಕೆಲಸಕ್ಕೆಂದು ಸಂಬಂಧಿಕರ ಜೊತೆ ರಾಜ್ಯಕ್ಕೆ ವಲಸೆ ಬಂದಿದ್ದರು. ಆದರೆ ಶೀಟ್ ಅನ್ನು ತೆಗೆದುಕೊಂಡು ಹೋಗುವಾಗ ಸ್ಕೀನ್ ಔಟ್ ಆಗಿದ್ದ ವೈಯರ್ ಶೀಟ್‌ಗೆ ತಾಕಿ ವಿದ್ಯುತ್ ಅವಘಡ ಸಂಭವಿಸಿದೆ.
ಇತ್ತೀಚೆಗೆ ಕಟ್ಟಡ ಮಾಲೀಕರ ನಿರ್ಲಕ್ಷ್ಯತೆಯಿಂದ ಕೂಲಿ ಕಾರ್ಮಿಕರು ದುರಂತ ಸಾವೀಗಿಡಾಗುತ್ತಿದ್ದಾರೆ. ನೊಂದಾಯಿತ ಕಟ್ಟಡ ಕೂಲಿ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಬೇಕು. ಆದರೆ ಕಟ್ಟಡ ಮಾಲೀಕರು ನೊಂದಾಯಿತರಾಗದ ಹೊರ ರಾಜ್ಯದ ಕಾರ್ಮಿಕರನ್ನ ಕರೆತಂದು ಕೆಲಸ ಮಾಡಿಸುತ್ತಿದ್ದಾರೆ. ಕೆಲಸದ ವೇಳೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳದೆ ಇರವುದು ಕೂಲಿ ಕಾರ್ಮಿಕರ ದುರಂತ ಸಾವಿಗೆ ಕಾರಣವಾಗಿದೆ ಎಂದು ಕಟ್ಟಡ ಕೂಲಿ ಕಾರ್ಮಿಕರ ಸಂಘ ಆರೋಪಿಸಿದೆ.
PublicNext
25/09/2022 07:45 pm