ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳಿಗೆ ಚಾಕೋಲೆಟ್ ಆಮಿಷ!; ಜಾಗೃತ ಗ್ರಾಮಸ್ಥರಿಂದ ಮಹಿಳೆ ಪೊಲೀಸ್ ವಶ

ದೊಡ್ಡಬಳ್ಳಾಪುರ: ಅಪರಿಚಿತ ಮಹಿಳೆಯೊಬ್ಬಳು ಚಾಕೋಲೆಟ್ ನೀಡಲು ಮಕ್ಕಳ ಕೈ ಹಿಡಿದು ಎಳೆದಿದ್ದಾಳೆ! ಈ ಬಗ್ಗೆ ಅನುಮಾನ-ಆತಂಕಗೊಂಡ ಗ್ರಾಮಸ್ಥರು ಮಕ್ಕಳ ಕಳ್ಳಿ ಎಂದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪರಿಣಾಮ ಗ್ರಾಮಗಳಿಗೆ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಕಂಡು ಬಂದರೆ ಮಕ್ಕಳ ಕಳ್ಳರೆಂದು ಹಲ್ಲೆ ನಡೆಸಿರುವ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದೆ. ಇಂತಹದ್ದೇ ಘಟನೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ನೆರಳೇಘಟ್ಟ ಗ್ರಾಮದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಧ್ಯ ವಯಸ್ಸಿನ ಅಪರಿಚಿತ ಮಹಿಳೆ ನೆರಳೇಘಟ್ಟ ಗ್ರಾಮದಲ್ಲಿ ಓಡಾಡುತ್ತಿದ್ದಳು. ಇದೇ ವೇಳೆ ಗ್ರಾಮದ ಮೂವರು ಹೆಣ್ಣುಮಕ್ಕಳಿಗೆ ಚಾಕೋಲೆಟ್ ಕೊಡಲು ಈ ಮಹಿಳೆ ಕೈಹಿಡಿದು ಎಳೆದಿದ್ದಾಳೆ. ಅಪರಿಚಿತ ಮಹಿಳೆ ಕಂಡು ಗಾಬರಿಗೊಂಡ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಕ್ಕೆ ಮಕ್ಕಳ ಕಳ್ಳಿ ಬಂದಿದ್ದಾಳೆಂದು ಆತಂಕಗೊಂಡ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮಹಿಳೆಯನ್ನು ವಿಚಾರಣೆ ಮಾಡಿದಾಗ ಆಕೆಯ ಹೆಸರು ಮಂಜುಳಾ ಎಂದು ತಿಳಿದು ಬಂದಿದೆ. ತನ್ನ ಸಂಬಂಧಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದಾಗಿ ಹೇಳುತ್ತಾಳೆ. ಒಮ್ಮೆ ಮಡಕುಶಿರಾ ಎಂದೇಳುವ ಆಕೆ ಮತ್ತೊಮ್ಮೆ ಸಿಂಗನಾಯಕನಹಳ್ಳಿ ಎಂದು ಹೇಳುತ್ತಿದ್ದಾಳೆ. ಆಕೆಯ ಗೊಂದಲದ ಹೇಳಿಕೆ ಸಹ ಅನುಮಾನ ಮೂಡಿಸಿದ್ದು, ಸದ್ಯ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

24/09/2022 07:26 pm

Cinque Terre

44.56 K

Cinque Terre

1

ಸಂಬಂಧಿತ ಸುದ್ದಿ