ಬೆಂಗಳೂರು: ವಾಯುಸೇನೆ ತರಬೇತಿಗೆ ಬಂದಿದ್ದ ದೆಹಲಿ ಮೂಲದ ಯುವಕ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ ಮೃತರ ಸಂಬಂಧಿಕರು ತಮ್ಮ ಹುಡುಗನ ಸಾವಿಗೆ ಅಧಿಕಾರಿಗಳೇ ಕಾರಣ ಅಂತ ಹೇಳಿ ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ದೆಹಲಿ ಮೂಲದ ಅಂಕಿತ್ ಕುಮಾರ್ ಮೃತನಾಗಿದ್ದು, ವರ್ಷಗಳ ಹಿಂದೆ ವಾಯು ಸೇನೆ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದ, ಜಾಲಹಳ್ಳಿಯ ಏರ್ ಪೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ. ಕಾರಣಾಂತರದಿಂದ ಅಂಕಿತ್‌ನನ್ನು ತರಬೇತಿಯಿಂದ ಅಧಿಕಾರಿಗಳು ಅಮಾನತು ಮಾಡಿದ್ದರು. ಇದ್ರಿಂದ ಮನನೊಂದ ಅಂಕಿತ್ ಸೆ.21ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಹಿನ್ನೆಲೆ ಪೋಷಕರು ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ಕೊಲೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
PublicNext
23/09/2022 01:02 pm