ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನರ ಚುಚ್ಚುಮಾತಿಗೆ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

ಯಲಹಂಕ: ಜನರ ಚುಚ್ಚುನುಡಿ-ಕೊಂಕುಮಾತಿಗೆ ರಾಮಾಯಣ ಮಹಾಭಾರತಗಳೆ ನಡೆದೋಗಿವೆ. ಜನರ ಕೊಂಕು- ಚುಚ್ಚುನುಡಿಗೆ ಬೆಂಗಳೂರಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿರುವ ಹೃದಯ ಕಲುಕುವ ಘಟನೆ ಯಲಹಂಕದ ಕೊಂಡಪ್ಪ ಲೇಔಟಿನಲ್ಲಿ ನಿನ್ನೆ ಸಂಜೆ ನಡೆದಿದೆ. ಹೀಗೆ ಶವವಾಗಿ ಬಿದ್ದಿರುವ ಈ ತಾಯಿಯ ಹೆಸರು ಪವಿತ್ರ(28). ಮಗ 10 ವರ್ಷದ ಮುರಳಿ ಮತ್ತು 6ವರ್ಷದ ನಿಹಾರಿಕಾ ತಾಯಿಯಿಂದ ಕೊಲ್ಲಲ್ಪಟ್ಟ ನತದೃಷ್ಟರು.

ಪಾವಗಡ ಮೂಲದ ಪವಿತ್ರ ಗಂಡನನ್ನು ಬಿಟ್ಟು ಐದಾರು ವರ್ಷಗಳಾಗಿದೆ. ಮೂರ್ನಾಲ್ಕು ವರ್ಷಗಳಿಂದ ಯಲಹಂಕದ ಕೊಂಡಪ್ಪ ಲೇಔಟ್‌ನ 15ನೇ ಕ್ರಾಸಿನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಗಾರ್ಮೆಂಟ್ಸ್ ಕೆಲಸಕ್ಕೋಗಿ ಮಕ್ಕಳನ್ನು ಸಾಕುತ್ತಿದ್ದಳು. ನಿನ್ನೆ ಅದೇನಾಯ್ತೊ ಏನೋ ಸಂಜೆ ಮಕ್ಕಳನ್ನು ಕೊಂದು, ತಾಯಿ ಪವಿತ್ರ ನೇಣಿಗೆ ಶರಣಾಗಿದ್ದಾಳೆ. ತಾಯಿಯ ಮೇಲೆಯೇ ಕೋಲೆ ಕೇಸ್ ದಾಖಲಿಸಿ ಯಲಹಂಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅಂತಾರೆ. ಮನೆ ಯಜಮಾನ ನೆಟ್ಟಗಿದ್ದಿದ್ದರೆ ಈ ರೀತಿ ತಾಯಿ ಮಕ್ಕಳು ಬೀದಿ ಹೆಣಗಳಾಗ್ತಿರಲಿಲ್ಲ. ಮೂರು ಜನರ ಸಾವಿಗೆ ನಿಖರವಾದ ಕಾರಣ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

Edited By : Shivu K
PublicNext

PublicNext

23/09/2022 10:49 am

Cinque Terre

30.22 K

Cinque Terre

1

ಸಂಬಂಧಿತ ಸುದ್ದಿ