ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 147 ಪ್ರಕರಣ ಪತ್ತೆ ಮಾಡಿ 72 ಆರೋಪಿಗಳನ್ನ ಬಂಧಿಸಿದ ಪಶ್ಚಿಮ ವಿಭಾಗ ಪೊಲೀಸರು

ಕಷ್ಟ ಪಟ್ಟು ಸಂಪಾದಿಸಿದ ತಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಂಡ ನೋವಿನಲ್ಲಿ ಜನರು ಪ್ರತಿ ದಿನ ಪೊಲೀಸ್ ಠಾಣೆಗೆ ಬರ್ತಾರೆ, ಆದ್ರೆ ಇವತ್ತು ಸಾಕಷ್ಟು ಜನರು ತಮ್ಮ ಕಳೆದ ವಸ್ತುಗಳು ಸಿಕ್ಕವು ಅಂತ ಪೊಲೀಸರ ಬಳಿ ಬಂದು ಖುಷಿಯಿಂದ ಕಳೆದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.

ಪಶ್ಚಿಮ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ, ವಾಹನಗಳ ಕಳವು, ಲ್ಯಾಪ್‌ಟ್ಯಾಪ್, ಚಿನ್ನಾಭಾರಣ ಕಳ್ಳವು ಸೇರಿದಂತೆ ಇತರೆ ನೂರಾರು ಪ್ರಕರಣಗಳನ್ನು ಭೇದಿಸಿದ್ದಾರೆ.

147 ಪ್ರಕರಣಗಳಲ್ಲಿ 72 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂರು ಕೋಟಿ 16 ಲಕ್ಷ ಮೌಲ್ಯದ 2 ಕೆಜಿ 745 ಗ್ರಾಂ ಚಿನ್ನ, 4 ಕೆಜಿ 859 ಗ್ರಾಂ ಬೆಳ್ಳಿ, 86 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕೆ ಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದಂದು ನಡೆದಿದ್ದ ಮನೆಗಳ್ಳತನ ಪ್ರಕರಣದ ಆರೋಪಿಗಳನ್ನ ಬಂಧಿಸಿರುವ ಪೊಲೀಸ್ರು ಸುಮಾರು 4.5 ಲಕ್ಷ ಮೌಲ್ಯದ 109 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಚಂದ್ರಕಲಾ ಎಂಬುವವರು ಕಳೆದ ಯುಗಾದಿ ಹಬ್ಬದ ಸಮಯದಲ್ಲಿ ಮನೆಯ ಬಾಗಿಲು ತೆರೆದು ಪಕ್ಕದ ಮನೆಯವರನ್ನ ಮಾತನಾಡಿಸಲು ಹೋಗಿದ್ದರಂತೆ. ಇದನ್ನು ಗಮನಿಸಿದ್ದ ಆರೋಪಿ ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಚಂದ್ರಕಲಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಚಂದ್ರಕಲಾ ವಾಸ ಮಾಡುವ ಬಿಲ್ಡಿಂಗ್‌ನಲ್ಲಿದ್ದ ಆರೋಪಿ ನವೀನ್ ಮನೆಯಲ್ಲಿ ಚಿನ್ನಭಾರಣ ಕದ್ದಿರುವುದು ಗೊತ್ತಾಗಿದೆ. ಹಬ್ಬದಂದು ಕಳೆದುಕೊಂಡಿದ್ದ ಚಂದ್ರಕಲಾ ಈಗ ಕಳವಾಗಿದ್ದ ಚಿನ್ನಾಭರಣ ಸಿಕ್ಕ ಖುಷಿಯಲ್ಲಿ ಮನೆಗೆ ಹಿಂತಿರುಗಿದ್ದು ವಿಶೇಷ.

ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಪಶ್ಚಮ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಕಳ್ಳತನ, ಮನೆಗಳ್ಳತನ ಪ್ರಕರಣಗಳ ವಸ್ತುಗಳನ್ನು ಪ್ರತಾಪ್ ರೆಡ್ಡಿ ಅವುಗಳ ಮಾಲೀಕರಿಗೆ ಹಿಂದಿರುಗಿಸಿದ್ರು.

Edited By :
PublicNext

PublicNext

21/09/2022 08:38 pm

Cinque Terre

32.16 K

Cinque Terre

0